ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಮ್ಮ ಮೊದಲ ಬಜೆಟ್ ನ್ನು ಇಂದು ಮಂಡಿಸಿದ್ದಾರೆ. ಬೆಂಗಳೂರು, ಮೈಸೂರು, ಕಲಬುರಗಿ,ಬೆಳಗಾವಿ ಎಂದು ಬಜೆಟ್ ನ್ನು ನಾಲ್ಕು ವಿಭಾಗಗಳಾಗಿ ಮಾಡಲಾಗಿದ್ದು, ಮಹಿಳೆಯರಿಗಾಗಿ ಮಹಿಳಾ ಬಜೆಟ್, ಚಿಣ್ಣರಿಗಾಗಿ ವಿಶೇಷ ಪುಣಾಣಿ ಬಜೆಟ್, ಬಜೆಟ್ ಗಾತ್ರ 2 ಲಕ್ಷ 60 ಸಾವಿರ ಕೋಟಿ ರೂ.ಇದೆ. ರಾಜ್ಯದ ಅಭಿವೃದ್ಧಿಗೆ ಪಂಚಸೂತ್ರ ರೂಪಿಸಿದ್ದು,ಶಿಕ್ಷಣ, ಉದ್ಯೋಗ, ಸಬಲೀಕರಣ, ಆರೋಗ್ಯ ಸೂತ್ರ ಅಳವಡಿಸಿಕೊಳ್ಳಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
30 ಸರ್ಕಾರಿ ಐಟಿಐ ಸರ್ಕಾರಿ ಕಾಲೇಜು ಮೇಲ್ದರ್ಜೆಗೆ ಏರಿಸಲಾಗುವುದು, ಗ್ರಾಮೀಣ ಜನರೆಗೆ ತಾಳೂಕು ಮಟ್ಟದಲ್ಲಿ ಹೃದಯ ಚಿಕಿತ್ಸೆ ನೀಡಲಾಗುವುದು. ರಾಜ್ಯದಲ್ಲಿ 7 ತಾಲೂಕಿನಲ್ಲಿ 100 ಹಾಸಿಗೆಗಳ ಆಸ್ಪತ್ರೆ ಸ್ಥಾಪನೆ, ಆಶಾ ಕಾರ್ಯಕರ್ತೆಯರಿಗೆ ಗೌರವಧನ 1 ಸಾವಿರ ರೂ. ಏರಿಕೆ ಮಾಡಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಕೃಷಿಗೆ 33,700 ಕೋಟಿ ರೂ. ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿಗೆ 68,478 ಕೋಟಿ ರೂ. ಬೆಂಗಳೂರು ಅಭಿವೃದ್ಧಿಗೆ8,409 ಕೋಟಿ ರೂ.ಮೀಸಲಿಡಲಾಗಿದೆ. ರಾಜ್ಯದಲ್ಲಿ ರೈತ ಶಕ್ತಿ ಹೊಸ ಯೋಜನೆ ಘೋಷಣೆ ಮಾಡಲಾಗಿದ್ದು,ಈ ಯೋಜನೆ ಮೂಲಕ ರೈತರಿಗೆ ಯಂತ್ರೋಪಕರಣ ಉಪಯೋಗಕ್ಕೆ ಸಹಾಯಧನ, 250 ರೂ. ಡೀಸೆಲ್ ಸಹಾಯಧನ ನೀಡಲಾಗುವುದು. 500 ಕೋಟಿ ರೂ. ಯೋಜನೆಗೆ ಒದಗಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ರಾಜ್ಯದಲ್ಲಿ ವಿನೂತನ ಮಾದರಿಯ 7 ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗುವುದು, ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ, ಹಾಗೂ ಬಾಗಲಕೋಟೆಯಲ್ಲಿ ಹೊಸ ವಿಶ್ವವಿದ್ಯಾಲಯ ಸ್ಥಾಪಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಗಂಗಾ ಕಲ್ಯಾಣ ಯೋಜನೆಗೆ 111 ಕೋಟಿ ರೂ. ಮೀಸಲು, ಶಾಲೆಗಳಲ್ಲಿ ಬಿಸಿಯೂಟ ತಯಾರಕರು ಹಾಗೂ ಸಹಾಯಕಿಯರಿಗೆ ಗೌರವ ಧನ 1 ಸಾವಿರ ರೂ.ಹೆಚ್ಚಳ ಮಾಡಲಾಗಿದೆ .
*ಕಟ್ಟಡ ಕಾರ್ಮಿಕರ ಶ್ರೇಯೋಭಿವೃದ್ಧಿಗೆ 2100 ಕೋಟಿ ಮೀಸಲು, ಕಟ್ಟಡ ಕಾರ್ಮಿಕರಿಗಾಗಿ 100 ಹೈಟೆಕ್ ಸಂಚಾರಿ ಕ್ಲಿನಿಕ್ ಆರಂಭ
* ರಿಯಾಯಿತಿ ಬಸ್ ಪಾಸ್ ಯೋಜನೆ,
* ಹುಬ್ಬಳ್ಳಿ ಹಾಗೂ ದಾವಣಗೆರೆ ESI ಆಸ್ಪತ್ರೆಗಳ ಬೆಡ್
100ಕ್ಕೆ ಹೆಚ್ಚಳ
* ಯೆಲ್ಲೊ ಬೋರ್ಡ್ ಡ್ರೈವರ್ ಮಕ್ಕಳಿಗಾಗಿ ವಿದ್ಯಾನಿಧಿ ಸ್ಕೀಮ್
* ಡ್ರೈವರ್ಸ್ ಮಕ್ಕಳ ಆರೋಗ್ಯ ಸೌಲಭ್ಯಕ್ಕೂ ವಿಶೇಷ ಯೋಜನೆ ಘೋಷಣೆ
* ಪ್ರಸಕ್ತ ಸಾಲಿನಲ್ಲಿ ಶಿಕ್ಷಣ, ಆರೋಗ್ಯ,ಕೌಶಲ್ಯಾಭಿವೃದ್ಧಿ ಮತ್ತು ವಿವಿಧ ಕಲ್ಯಾಣ ಇಲಾಖೆಗಳಿಗೆ ಕ್ರಮವಾಗಿ 6,329 ಕೋಟಿ ಹೆಚ್ಚುವರಿ ಅನುದಾನ.
* ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ವಲಯಕ್ಕೆ 55,657 ಕೋಟಿ ಅನುದಾನ
* ಬೆಂಗಳೂರು ಸಮಗ್ರ ಅಭಿವೃದ್ಧಿ ಗೆ,8,409 ಕೋಟಿ ಅನುದಾನ
* ಸಂಸ್ಕೃತಿ, ಪರಂಪರೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ವಲಯಕ್ಕೆ 3,012 ಕೋಟಿ,
* ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವಾ ವಲಯಕ್ಕೆ 56,710 ಕೋಟಿ
* ಬೆಳಗಾವಿಯಲ್ಲಿ ಕಿದ್ವಾಯಿ ಸ್ಮಾರಕ ಗ್ರಂಥಿ ಆಸ್ಪತ್ರೆ ನಿರ್ಮಾಣ
* ಬೆಳಗಾವಿ ಹಾಗೂ ಬಳ್ಳಾರಿಯಲ್ಲಿ ಹೊಸ ಕೃಷಿ ಕಾಲೇಜು ಸ್ಥಾಪನೆ.
* ಚಿತ್ರದುರ್ಗದಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ.
* ತಾಲೂಕು ಮಟ್ಟದಲ್ಲಿ ನೀಟ್ ಪರೀಕ್ಷೆ ತರಬೇತಿ ಕೇಂದ್ರ
* ಬೆಂಗಳೂರಿನಲ್ಲಿ ಮೆಗಾ ಜ್ಯುವೆಲ್ಲರಿ ಪಾರ್ಕ್ ಸ್ಥಾಪನೆ 10, 000 ಮಂದಿಗೆ ಉದ್ಯೋಗ.
* ಹುಬ್ಬಳ್ಳಿಯಲ್ಲಿ 500 ಕೋಟಿ ರು ವೆಚ್ಚದಲ್ಲಿ ಜಯದೇವ ಆಸ್ಪತ್ರೆ ಸ್ಥಾಪನೆ
* ಬೆಂಗಳೂರಿನ ಯಲಹಂಕದಲ್ಲಿ ಅಟಲ್ ಬಿಹಾರ್ ವಾಜಪೇಯಿ ಪಾರ್ಕ್ ಸ್ಥಾಪನೆ 300 ಕೋಟಿ ರು ವೆಚ್ಚ.
* ಕಳಸಾ ಬಂಡೂರಿ ಯೋಜನೆಗೆ 1000 ಕೋಟಿ ರು ಅನುದಾನ
* ಮೇಕೇದಾಟು ಯೋಜನೆ ಅನುಷ್ಠಾನಕ್ಕೆ 1000 ಕೋಟಿ ರು ಅನುದಾನ
* ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತಕ್ಕೆ 3000 ಕೋಟಿ ರು ಮಂಜೂರು.














