Coastal Bulletin

ನೆಲ್ಲೂರು : ನೆಲ್ಲೂರು ಜಿಲ್ಲೆಯ ಕಂದಕೂರ್’ನಲ್ಲಿ ಟಿಡಿಪಿ ಮುಖ್ಯಸ್ಥ ಹಾಗೂ ಆಂದ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ರ‍್ಯಾಲಿಯಲ್ಲಿ ಕಾಲ್ತುಲಿತದಂತಹ ಪರಿಸ್ಥಿತಿ ನಿರ್ಮಾಣವಾಗಿ 7ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.

ನಾಯ್ಡು ಅವರ ರೋಡ್ ಶೋ ವೀಕ್ಷಿಸಲು ಸಾವಿರಾರು ಮಂದಿ ಆಗಮಿಸಿದ್ದರು. ಈ ವೇಳೆ ನೂಕು ನುಗ್ಗಲಿನಿಂದಾಗಿ ಜನರು ಆಯ ತಪ್ಪಿ ಒಳಚರಂಡಿ ಕಾಲುವೆಗೆ ಬಿದ್ದಿದ್ದಾರೆ ಈ ವೇಳೆ ಕಾಲ್ತುಲಿತ

ಪರಿಸ್ಣತಿ ಕೂಡ ನಿರ್ಮಾಣವಾಗಿದೆ ಎನ್ನಲಾಗಿದೆ.

ಒಳಚರಂಡಿ ಕಾಲುವೆಗೆ ಬಿದ್ದು ಮಹಿಳೆ ಸೇರಿ 7 ಜನರು ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ. ಘಟನೆಯ ಬಳಿಕ ಚಂದ್ರ ಬಾಬು ನಾಯ್ಡು ಸಭೆಯನ್ನು ರದ್ದುಗೊಳಿಸಿದ್ದಾರೆ.

Leave a Comment