Coastal Bulletin

ಬಂಟ್ವಾಳ : ಶ್ರೀ ರಾಮ‌ಮಂದಿರ ಕೊಟ್ಟಿಂಜ , ಶ್ರೀ ರಾಮ ಚೈತನ್ಯ ಯೋಜನೆ ಇದರ ವತಿಯಿಂದ ಆರ್ಯವೇದ ಅಕಾಡೆಮಿ ಚಾಮರಾಜಪೇಟೆ, ಬೆಂಗಳೂರು ಇದರ ಸಹಯೋಗದಲ್ಲಿ ಉಚಿತ ಆರ್ಯುವೇದ ವೈದ್ಯಕೀಯ ಶಿಬಿರ ಜ.1 ರಂದು ಶ್ರೀ ರಾಮ‌ಮಂದಿರ ಕೊಟ್ಟಿಂಜದಲ್ಲಿ ನಡೆಯಲಿದೆ.

ಈ ಶಿಬಿರದಲ್ಲಿ ಡಾ. ವಿವೇಕ ಕಾಪು ನೇತ್ರತ್ವದ ಖ್ಯಾತ ವೈದ್ಯ ಸ್ವಯಂ ಸೇವಕ ತಂಡದಿಂದ ಹಾಗೂ ಸ್ತ್ರೀ ರೋಗ ತಜ್ಞರಿಂದ ತಪಾಸಣೆ ಮತ್ತು ಸಲಹೆ ವೈದ್ಯರು ಸೂಚಿಸಿದ ರೋಗಿಗಳಿಗೆ ಉಚಿತವಾಗಿ ಔಷಧಿ ನೀಡಲಾಗುವುದು.

ಇದರ ಜೊತೆಗೆ  ಇದರ ವೈದರಿಂದ ಅಕ್ಯುಪ್ರೆಶರ್ ಚಿಕಿತ್ಸೆ, ನಾಡಿ ಚಿಕಿತ್ಸೆ , ಜೀವನ ಶೈಲಿ ಮತ್ತು ಆಹಾರ ಪದ್ಧತಿ ಹಾಗೂ ಕಣ್ಣು ತಪಾಸಣೆ ಕೂಡ

ನಡೆಯಲಿದೆ.

ಈ ಶಿಬಿರವನ್ನು ಶ್ರೀ ರಾಮಸುರಭಿ ಗೋಮಂದಿರ,  ರಾಷ್ಟ್ರೀಯ ಗೋಸೇವಾ ಸಂಸ್ಥಾನ್ ಅಧ್ಯಕ್ಷರು ಶ್ರೀ ಭಕ್ತಿ ಭೂಷನ್ ಪ್ರಭುಜೀ ಉದ್ಘಾಟನೆ ಮಾಡಲಿದ್ದಾರೆ.

ಶ್ರೀ ರಾಮ ಮಂದಿರ ಕೊಟ್ಟಿಂಜ ಇದರ ಗೌರವಾಧ್ಯಕ್ಷ ಶ್ರೀ ಕಾಂತಪ್ಪ ಶೆಟ್ಟಿ ಕೊಡ್ಮಾಣ್ ಮತ್ತು ಮೇರಮಜಲು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷ ಶ್ರೀ ಪದ್ಮನಾಭ ಶೆಟ್ಟಿ ಕೊಟ್ಟಂಜ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

Leave a Comment