ಬೆಂಗಳೂರು: ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕ ಸ್ಥಾನ ಬಿ.ಕೆ. ಹರಿಪ್ರಸಾದ್ ಪಾಲಾದ ಹಿನ್ನೆಲೆಯಲ್ಲಿ ಆ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಸಿಎಂ ಇಬ್ರಾಹಿಂ ಪಕ್ಷ ತೊರೆದು ಬೇರೆ ಪಕ್ಷಕ್ಕೆ ಸೇರಲಿದ್ದಾರೆ.
ಪರಿಷತ್ ವಿಪಕ್ಷ ಸ್ಥಾನ ಕೈ ತಪ್ಪಿರುವುದಕ್ಕೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಸಿ.ಎಂ, ಇಬ್ರಾಹಿಂ, ಸಿದ್ದರಾಮಯ್ಯ ಅವರಿಗಾಗಿ ದೇವೇಗೌಡರನ್ನು ಬಿಟ್ಟು, ಕಾಂಗ್ರೆಸ್ ಗೆ ಬಂದೆ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅವರು ಸೋತಾಗ ಬಾದಾಮಿಯಲ್ಲಿ ನಿಲ್ಲಿಸಿ, ಅಲ್ಲಿನ
ಮುಖಂಡರೊಂದಿಗೆ ಮಾತುಕತೆ ನಡೆಸಿ, ಗೆಲ್ಲಿಸುವ ಮೂಲಕ ಹೊಸ ರಾಜಕೀಯ ಜೀವನ ಕೊಟ್ಟೆ ಆದರೆ ಅವರು ಕೂಡ ಕಡೆಗಣಿಸಿದ್ದಾರೆ, ಇದೀಗ ಕಾಂಗ್ರೆಸ್ ಮುಗಿದ ಅಧ್ಯಾಯ ಎಂದು ನುಡಿದರು.
ಸಿ.ಎಂ.ಇಬ್ರಾಹಿಂ ಅವರು ಜೆಡಿಎಸ್ ಗೆ ಬರುವುದಾದರೆ ಸ್ವಾಗತ ಎಂದು ಕುಮಾರಸ್ವಾಮಿ ಆಹ್ವಾನ ನೀಡಿದ್ದಾರೆ.















