ಬಂಟ್ವಾಳ: ನಾಗರೀಕ ಕ್ರಿಯಾ ಸಮಿತಿ ಸಂಚಯಗಿರಿ ಇದರ ಮಹಾಸಭೆಯು ನರಸಿಂಹ ರಾಜ ಹೊಳ್ಳ ಇವರ ವಠಾರದಲ್ಲಿ ಅಧ್ಯಕ್ಷ ನಾರಾಯಣ್ ನಾಯಕ್ ಇವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರಗಿತು. ಈ ಸಂದರ್ಭ 2022-23 ನೇ ಸಾಲಿನ ನೂತನ ಅಧ್ಯಕ್ಷರಾಗಿ ಸುರೇಶ್ ಬಂಗೇರ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಪ್ರಿಯಲತಾ, ಕಾರದರ್ಶಿಯಾಗಿ ಶಿವ ನಾಯಕ್ , ಕೋಶಾಧಿಕಾರಿಯಾಗಿ ರಾಮಕೃಷ್ಣ ನಾಯಕ್ , ಕ್ರೀಡಾಕಾರ್ಯದರ್ಶಿಯಾಗಿ ಪುರಂದರ ಶೆಟ್ಟಿ ಹಾಗು ಗೌರವ ಅಧ್ಯಕ್ಷರಾಗಿ ನರಸಿಂಹ ರಾಜ್ ಹೊಳ್ಳ ಆಯ್ಕೆಯಾದರು. ಹಾಗೂ ಸಮಿತಿಗೆ ಹನ್ನೊಂದು ಮಂದಿ
ಸದಸ್ಯರನ್ನು ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷ ಸುರೇಶ್ ಬಂಗೇರ ಮಾತನಾಡಿ ಸಂಚಯ ಗಿರಿಯ ಎಲ್ಲಾ ಸದಸ್ಯರು ಸಹಕಾರ ನೀಡಬೇಕು, ತನ್ನಿಂದ ಸಾಧ್ಯವಾದಷ್ಟು ಸಮಿತಿಯೊಂದಿಗೆ ಸಂಚಯಗಿರಿಯ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು. ದಾಮೋದರ್ ವಂದಿಸಿದರು.














