ರೈತರ ಪ್ರತಿಭಟನಾ ಸ್ಥಳಕ್ಕೆ ಸಚಿವ ರಾಮಲಿಂಗಾ ರೆಡ್ಡಿ ಭೇಟಿ- ಹಲವು ಷರತ್ತುಗಳೊಂದಿಗೆ ಬೆಂಗಳೂರು ಬಂದ್ ಹಿಂಪಡೆದ ಹೋರಾಟಗಾರರು.

Coastal Bulletin
ರೈತರ ಪ್ರತಿಭಟನಾ ಸ್ಥಳಕ್ಕೆ ಸಚಿವ ರಾಮಲಿಂಗಾ ರೆಡ್ಡಿ ಭೇಟಿ- ಹಲವು ಷರತ್ತುಗಳೊಂದಿಗೆ ಬೆಂಗಳೂರು ಬಂದ್ ಹಿಂಪಡೆದ ಹೋರಾಟಗಾರರು.

ಬೆಂಗಳೂರು: ಬೆಂಗಳೂರು ಬಂದ್‌ ಸಂಪೂರ್ಣ ಯಶಸ್ವಿಯಾಗಿದೆ. ಸಹಕಾರ ನೀಡಿದ ಎಲ್ಲ ಸಂಘಟನೆಗಳು ಹಾಗೂ ಬೆಂಗಳೂರಿನ ಜನತೆಗೆ ಧನ್ಯವಾದಗಳನ್ನು ಅರ್ಪಿಸುವ ಮೂಲಕ ಇಂದಿನ ಬಂದ್‌ ಅನ್ನು ಮುಕ್ತಾಯಗೊಳಿಸುತ್ತೇವೆ. ಜೊತೆಗೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಮಾಡುವುದಾಗಿ ರೈತಮುಖಂಡ ಕುರುಬೂರು ಶಾಂತಕುಮಾರ್‌ ಹೇಳಿದ್ದಾರೆ.

ಬೆಂಗಳೂರು ಬಂದ್‌ನಲ್ಲಿ ಪಾಲ್ಗೊಂಡ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಎಲ್ಲರೂ ಶಾಂತ ರೀತಿಯಿಂದಲೆ ಪ್ರತಿಭಟನೆ ಮಾಡಿ ಬಂದ್‌ಗೆ ಬೆಂಬಲ ನೀಡಿದ್ದಾರೆ. ಬೆಂಗಳೂರು ಬಂದ್‌ ಸಂಪೂರ್ಣವಾಗಿ ಯಶಸ್ವಿ ಆಗಿದ್ದು, ಇಲ್ಲಿಗೆ ಬಂದ್‌ ಅನ್ನು ಮುಕ್ತಾಯಗೊಳಿಸಲಾಗುತ್ತದೆ. ಇನ್ನು ಪ್ರತಿಭಟನೆ ವೇಳೆ ಬಂಧಿತರಾದ ಎಲ್ಲ ಹೋರಾಟಗಾರರನ್ನು ಬಂಧನದಿಂದ

ಬಿಡುಗಡೆ ಮಾಡಲಾಗಿದೆ. ಅವರ ಮೇಲೆ ಹಾಕಿದ ಎಲ್ಲ ಕೇಸ್‌ಗಳನ್ನು ವಾಪಸ್‌ ಪಡೆಯಲಾಗುತ್ತದೆ. ಜೊತೆಗೆ, ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ಸ್ಥಗಿತಗೊಳಿಸಲಾಗುವುದು ಎಂದು ಸಚಿವರು ಭರವಸೆ ಕೊಟ್ಟಿರುವ ಹಿನ್ನೆಲೆಯಲ್ಲಿ ಬಂದ್‌ ವಾಪಸ್‌ ಪಡೆಯಲಾಗುತ್ತಿದೆ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್‌ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

Leave a Comment