Coastal Bulletin

ಭಾರತೀಯ ಜನತಾ ಪಾರ್ಟಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾ ವತಿಯಿಂದ ಗಣರಾಜ್ಯೋತ್ಸವದ ಅಂಗವಾಗಿ ನಮ್ಮ ರಾಷ್ಟ್ರಧ್ವಜದ ಇತಿಹಾಸ, ಧ್ವಜ ಆರೋಹಣ, ಅವರೋಹಣ ಮತ್ತು ಶೋಕಾಚರಣೆ ಪ್ರಾತ್ಯಕ್ಷಿಕೆ ಹಾಗೂ ಸಂವಿಧಾನದ ಕುರಿತಂತೆ ಕೆಸರೆಯಲ್ಲಿರುವ ಛಾಯಾದೇವಿ ವಿದ್ಯಾಸಂಸ್ಥೆಯಲ್ಲಿರುವ ಶಾಲಾ ಮಕ್ಕಳಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮ ಉದ್ದೇಶಿಸಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಸಾಮಾಜಿಕ ಜಾಲತಾಣ ಸಂಚಾಲಕರಾದ ಸು. ಮುರಳಿ ರವರು  ರಾಷ್ಟ್ರಧ್ವಜದ ಮಹತ್ವ ಹಾಗೂ ಅದರ ವೈಶಿಷ್ಟ್ಯತೆ ಗೌರವ ಕೊಡುವುದು ಹೇಗೆ ಎಂಬುದರ ಬಗ್ಗೆ  ಶಿಬಿರ ಶಾಲೆಗಳಲ್ಲಿ ನಡೆಯಲಿ,ರಾಷ್ಟ್ರಧ್ವಜಕ್ಕೆ ಗೌರವ ಕೊಡುವುದು ಎಲ್ಲರ ಕರ್ತವ್ಯ ಆಗಬೇಕು. ರಾಷ್ಟ್ರಧ್ವಜದ ಸಂಹಿತೆ ಬಗೆಗೆ ಕಾನೂನು ಮತ್ತು ಅರಿವು ಎಲ್ಲರಿಗೂ ಇರಬೇಕಿದೆ. ನಿರ್ಲಕ್ಷ್ಯ ಮಾಡಿದರೆ ಕಠಿಣ ಶಿಕ್ಷೆಯು ಇದೆ. ರಾಷ್ಟ್ರಧ್ವಜದ ನಿರ್ವಹಣೆಯ ಶಿಬಿರಗಳು ಪ್ರತಿ ಶಾಲೆಗಳಲ್ಲಿ ನಡೆಯಬೇಕು ಹಾಗು ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವದರಿಂದ ಪ್ರತಿಯೊಬ್ಬರಲ್ಲಿಯೂ ರಾಷ್ಟ್ರೀಯ ಮನೋಭಾವನೆ  ಏಕತೆಯ ಸಹಕಾರ ಮನೋಭಾವನೆಗಳನ್ನು ಬೆಳೆಸುವಂತಹ ಪರಿಕಲ್ಪನೆಯನ್ನು ನಮ್ಮ ರಾಷ್ಟ್ರೀಯ ಹಬ್ಬಗಳು ಮೂಡಿಸಲಿ .ಗಣರಾಜ್ಯೋತ್ಸವ ದಿನದಂದು ಕೇವಲ ಬಾವುಟವನ್ನು ಹಾರಿಸಿ ಸಿಹಿ ತಿಂದು ಹೋಗುವುದಷ್ಟೇ ಅಲ್ಲ ಗಣರಾಜ್ಯೋತ್ಸವ ದಿನದಂದು ಬಾವುಟವನ್ನು ಏಕೆ ಹಾರಿಸುತ್ತಾರೆ ಸಂವಿಧಾನ ಹೇಗೆ ಬಂತು ಎಂಬುದರ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸಿದರು.

ನಂತರ ಮಾತನಾಡಿದ ಕ್ಷೇತ್ರದ ಅಧ್ಯಕ್ಷರಾದ ಡಾ ಭಾನುಪ್ರಕಾಶ್  ರವರು ಪ್ಲ್ಯಾಸ್ಟಿಕ್ ಅನ್ನುವ ಮಹಾಮಾರಿಯು ಜಗತ್ತಿನಾದ್ಯಂತ ಆವರಿಸಿದ್ದು ನಮ್ಮ ರಾಷ್ಟ್ರ ವನ್ನೇನೂ ಹೊರತುಪಡಿಸಿಲ್ಲಾ ಅಷ್ಟೆ ಅಲ್ಲದೆ ನಮ್ಮ ರಾಷ್ಟ್ರಧ್ವಜ ಪ್ಲ್ಯಾಸ್ಟಿಕ್ ನಿಂದ ತಯಾರು ಮಾಡುವ

ಅನೇಕ ಕಾರ್ಖಾನೆಗಳಿಂದ ಹೊರಬಂದು  ಆಕರ್ಷಣೆಯಿಂದ ಕಣ್ಣಿಗೆಲ ಕಾಣಿಸುತ್ತದೆ.ಅಂತಹ ಪ್ಲಾಸ್ಟಿಕ್ ಧ್ವಜವನ್ನು ನಾವೇನಾದರೂ ತೆಗೆದುಕೊಂಡು ಅಂದಿನ ಕ್ಷಣಿಕ ದಿಂದ ಸಂತೋಷಪಡಬಹುದೆ ಹೊರೆತ ಶಾಶ್ವತವಾದ ಸಂತೋಷವನ್ನು ಪಡೆಯಲು ಸಾಧ್ಯವಿಲ್ಲ ಏಕೆಂದರೆ ಗಣರಾಜ್ಯೋತ್ಸವದ ಸಂಜೆ ವೇಳೆಗೆ ಪ್ಲಾಸ್ಟಿಕ್ ಧ್ವಜವನ್ನು ಅಲ್ಲಿ ಇಲ್ಲಿ ಬಿಸಾಡಿ ರಾಷ್ಟ್ರಧ್ವಜಕ್ಕೆ ಅವಮಾನ ಅಪಮಾನ ಮಾಡುವ ರೀತಿಯಲ್ಲಿ ಅಸಂತೋಷವನ್ನು ಹಾಗೂ ರಾಷ್ಟ್ರದ್ರೋಹಿ ಕೆಲಸವನ್ನ ಮಾಡಿದಂತಾಗುತ್ತದೆ ಆದ್ದರಿಂದ ನಾವೆಲ್ಲರೂ ರಾಷ್ಟ್ರಧ್ವಜದ ರಾಷ್ಟ್ರ ಸಂರಕ್ಷಣಾ ಹಾಗೂ ಸಂವಿಧಾನದ ಆಶೋತ್ತರಗಳಿಗೆ ತಲೆಬಾಗಿ ಇರಬೇಕಾಗಿರುವುದು ಭಾರತೀಯರಾದ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಆದ್ದರಿಂದ ಪ್ಲಾಸ್ಟಿಕ್ ಧ್ವಜವನ್ನು ತ್ಯಜಿಸೋಣ , ಕೈಮಗ್ಗ ಬಾವುಟವನ್ನು ಹಾರಿಸೋಣ ಎಂದು ಶಾಲಾ ಮಕ್ಕಳಿಗೆ ಜಾಗೃತಿ ಮೂಡಿಸಿದರು.

ಈ ಕಾರ್ಯಕ್ರಮದಲ್ಲಿ ಕ್ಷೇತ್ರದ ಯುವಮೋರ್ಚಾ ಅಧ್ಯಕ್ಷರಾದ ಡಿ ಲೋಹಿತ್, ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳಾದ ವೇಲು, ಉಪಾಧ್ಯಕ್ಷರಾದ ಮಂಜು, ಮೈಸೂರು ನಗರ ಯುವ ಮೋರ್ಚಾ ಉಪಾಧ್ಯಕ್ಷ ರಾದ ಕಾರ್ತಿಕ್ ಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ್ ಕುಮಾರ್, ನಗರ ಯುವ ಮೋರ್ಚಾ ಕಾರ್ಯದರ್ಶಿ ಗಳಾದ ಪುನೀತ್, ನಗರ ಕಾರ್ಯಕಾರಿಣಿ ಸದಸ್ಯರಾದ ಕೃಷ್ಣಮೂರ್ತಿ ರಾವತ್, ಕ್ಷೇತ್ರದ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ನವೀನ್ ಶೆಟ್ಟಿ, ಹಾಗೂ ಉಪಾಧ್ಯಕ್ಷರುಗಳಾದ ಚೇತನ್, ಹಾಗೂ ಶ್ಯಾಮ್, ರಾಜು ,ಮುಂತಾದವರು ಉಪಸ್ಥಿತರಿದ್ದರು.

Leave a Comment