Coastal Bulletin

ಕಾಂತವರ :ತೆಂಕು ತಿಟ್ಟು ಯಕ್ಷಗಾನ ರಂಗದ ಪ್ರಸಿದ್ಧ, ಹಿರಿಯ ಯಕ್ಷಗಾನ ಕಲಾವಿದ ಮುಳಿಯಾಲ ಭೀಮ ಭಟ್ಟರು ಇಂದು ಮುಂಜಾನೆ ಕಾಂತಾವರದಲ್ಲಿ ವಯೋಸಜಹ ಕಾಯಿಲೆಯಿಂದ ನಿಧನರಾದರು .ಇವರಿಗೆ 91ವರ್ಷ ಪ್ರಾಯವಾಗಿತ್ತು. ಕಳೆದ ಇಪ್ಪತ್ತು ವರ್ಷಗಳಿಂದ ಕಾಂತಾವರ ದೇವಸ್ಥಾನದಲ್ಲಿ ಸೇವೆ ಮಾಡಿದ ಭೀಮ ಭಟ್ಟರ ಆರೋಗ್ಯ ಕಳೆದ ನಾಲ್ಕು ತಿಂಗಳಿಂದ ಹದಗೆಟ್ಟಿತ್ತು. ಕ್ಷೇತ್ರದ ಧರ್ಮದರ್ಶಿಗಳಾದ ಡಾ. ಜೀವಂಧರ ಬಲ್ಳಾಳರ ಉಪಸ್ಥಿತಿಯಲ್ಲಿ ಅಂತ್ಯ ಕ್ರಿಯೆ ಬೆಳುವಾಯಿ ಸ್ಮಶಾನದಲ್ಲಿ ನಡೆಸಲಾಗುತ್ತಿದೆ.

ಭೀಮ ಭಟ್ಟರ ತಂದೆ ಕೇಚಣ್ಣ (ಕೇಶವ) ಭಟ್ಟರೂ ಯಕ್ಷಗಾನ ವೇಷಧಾರಿಯಾಗಿದ್ದರು. ಕುರಿಯ ಶಾಸ್ತ್ರಿಗಳ ನೆಚ್ಚಿನ ಶಿಷ್ಯರಲ್ಲೊಬ್ಬರಾದ ಇವರು ಕುರಿಯ ಶಾಸ್ತ್ರಿಗಳ ಸಂಚಾಲಕತ್ವದ ಶ್ರೀ ಧರ್ಮಸ್ಥಳ ಮೇಳದಿಂದ ಕಲಾ ಜೇವನ ಆರಂಭಿಸಿದ್ದರು.

ಸುಮಾರು

5 ದಶಕಗಳ ಕಾಲ ಯಕ್ಷ ಸೇವೆಯಲ್ಲಿ ನಿರತರಗಿದ್ದ ಇವರು ಧರ್ಮಸ್ಥಳ, ಕಟೀಲು, ಸುಂಕದಕಟ್ಟೆ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರ ಶ್ರೀ ದೇವಿ ಮಹಾತ್ಮೆಯ ಶ್ರೀ ದೇವಿಯ ಪಾತ್ರವು ಬಹಳ ಪ್ರಸಿದ್ಧವಾಗಿತ್ತು.

Leave a Comment