ಬೆಂಗಳೂರಿನಲ್ಲಿ ಕರಾವಳಿಯ ಇತಿಹಾಸ ಪ್ರಸಿದ್ಧ ಕಂಬಳ: ಗಣ್ಯಾತಿ ಗಣ್ಯರು ಭಾಗಿ,ಸರಕಾರದಿಂದಲೂ ಅನುದಾನ.

Coastal Bulletin
ಬೆಂಗಳೂರಿನಲ್ಲಿ ಕರಾವಳಿಯ ಇತಿಹಾಸ ಪ್ರಸಿದ್ಧ ಕಂಬಳ: ಗಣ್ಯಾತಿ ಗಣ್ಯರು ಭಾಗಿ,ಸರಕಾರದಿಂದಲೂ ಅನುದಾನ.

ಬೆಂಗಳೂರು: ಕರಾವಳಿ ಮೂಲದ ಜನಪ್ರಿಯ ಸಾಂಪ್ರದಾಯಿಕ ಕ್ರೀಡೆ ಕಂಬಳ ಇದೇ ಮೊದಲ ಬಾರಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿದೆ. ಮುಂದಿನ ವಾರಾಂತ್ಯ ನವೆಂಬರ್ 25 ಮತ್ತು 26ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜನೆಗೊಂಡಿದೆ.

ಬೆಂಗಳೂರು ಕಂಬಳಕ್ಕೆ ಪೂರ್ವಭಾವಿಯಾಗಿ ಇಂದು ಕುದಿ ಕಂಬಳಕ್ಕೆ ಚಾಲನೆ ನೀಡಲಾಗಿದೆ.ಸುಮಾರು 15 ರಿಂದ 20 ಲಕ್ಷ ಜನ ಕರಾವಳಿ ಭಾಗದವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರೆಲ್ಲರ ಅಪೇಕ್ಷೆಯಂತೆ ರಾಜ್ಯ, ರಾಷ್ಟ್ರ ಹಾಗೂ ವಿಶ್ವಕ್ಕೆ ಕಂಬಳವನ್ನ ಪರಿಚಯಿಸುವ ದೃಷ್ಟಿಯಿಂದ ಕಂಬಳ ಆಯೋಜಿಸಿದ್ದೇವೆ. ಸುಮಾರು 220 ಜೊತೆ ಕೋಣಗಳು ನೋಂದಣಿ ಆಗಿದ್ದು, ಆ ಪೈಕಿ 200 ಕೋಣಗಳು ಕಂಬಳದಲ್ಲಿ ಭಾಗಿಯಾಗಲಿವೆ.


ಕಂಬಳಕ್ಕೆ ಯಾವುದೇ ಟಿಕೆಟ್ - ಪಾಸ್ ಇರಲ್ಲ.25 ರಂದು 11.10 ಕ್ಕೆ ಉದ್ಘಾಟನೆಯಾಗಲಿದ್ದು, 26ರಂದು ಸಂಜೆ ಸುಮಾರು 7 ಗಂಟೆಗೆ ಕಂಬಳ ಮುಕ್ತಾಯವಾಗಲಿದೆ. ಆರರಿಂದ ಏಳು ಸಾವಿರ ಜನ ಗ್ಯಾಲರಿಯಲ್ಲಿ ಕುಳಿತು ಕಂಬಳ ವೀಕ್ಷಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ವಿವಿಐಪಿ, ವಿಐಪಿ, ಸಾರ್ವಜನಿಕರಿಗೆ ಪ್ರತ್ಯೇಕ ಪ್ರವೇಶದ್ವಾರ ಪಾರ್ಕಿಂಗ್ ವ್ಯವಸ್ಥೆ ಇರಲಿದೆ. ಕಂಬಳ ವೀಕ್ಷಣೆಗೆ ಯಾವುದೇ ಪಾಸ್, ಯಾರಿಗೂ ದುಡ್ಡು ಕೊಡುವ ಅಗತ್ಯವಿಲ್ಲ ಎಂದು ಶಾಸಕ ಅಶೋಕ್ ರೈ ಮಾಹಿತಿ ನೀಡಿದರು.

ಬಹುಮಾನದ ವಿವರ: ಪ್ರಥಮ ಸ್ಥಾನ ಪಡೆದ ಕೋಣಗಳಿಗೆ 16 ಗ್ರಾಂ ಬಂಗಾರ, 1 ಲಕ್ಷ ರೂ. ನಗದು,ಕೋಣಗಳಿಗೆ 16 ಗ್ರಾಂ ಬಂಗಾರ, 1 ಲಕ್ಷ ರೂ. ನಗದು

ಬಹುಮಾನವಿರಲಿದೆ. ದ್ವಿತೀಯ ಸ್ಥಾನ ಪಡೆದ ಕೋಣಗಳಿಗೆ 8 ಗ್ರಾಂ ಬಂಗಾರ ಹಾಗೂ 50 ಸಾವಿರ ನಗದು ಹಾಗೂ ತೃತೀಯ ಸ್ಥಾನ ಪಡೆಯುವ ಕೋಣಗಳಿಗೆ 4 ಗ್ರಾಂ ಬಂಗಾರ ಹಾಗೂ 25 ಸಾವಿರ ರೂ. ನಗದು ಬಹುಮಾನವಿರಲಿದೆ.

ಕಂಬಳಕ್ಕೆ ಮೂಲತಃ ಕ್ರೀಡಾಪಟುವಾಗಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್‌ ಸಿಂಗ್‌ ಅವರನ್ನು ಆಯೋಜಕರು ಆಹ್ವಾನಿಸಿ ಆಹ್ವಾನ ಪತ್ರಿಕೆ ಸಹ ಮುದ್ರಣವಾಗಿ ಭಾರೀ ವಿರೋಧ ವ್ಯಕ್ತವಾಗಿತ್ತು.

ಸಂಘಟಕರು ನವೆಂಬರ್ 26 ರಂದು ಕುಸ್ತಿಪಟುಗಳ ಅಭಿನಂದನಾ ಸಮಾರಂಭಕ್ಕೆ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಕೈ ಬಿಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಕಾರ್ಯಕ್ರಮದ ಅತಿಥಿಗಳ ಪಟ್ಟಿಯಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ ದರ್ಶನ್ ತೂಗುದೀಪ, ಬಿಜೆಪಿ ನಾಯಕ ಅರವಿಂದ ಲಿಂಬಾವಳಿ ಮತ್ತು ಇತರರು ಇದ್ದಾರೆ.

ಕಂಬಳಕ್ಕೆ ಸುಮಾರು ಒಂಬತ್ತು ಕೋಟಿ ರೂ. ಖರ್ಚು ವೆಚ್ಚ ಆಗಲಿದೆ ಎಂದು ಕಂಬಳ ಸಮಿತಿ‌ ಅಧ್ಯಕ್ಷ ಹಾಗೂ ಶಾಸಕ ಅಶೋಕ್ ರೈ ತಿಳಿಸಿದರು.ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, " ಸರ್ಕಾರ ಒಂದು ಕೋಟಿ ರೂಪಾಯಿ ಅನುದಾನ ನೀಡಲಿದೆ. ಹಲವು ಸಂಘಟನೆಗಳು ಕೂಡಾ ಖರ್ಚು ವೆಚ್ಚಕ್ಕೆ ಸಹಕಾರ ನೀಡಿದೆ " ಎಂದರು.

Leave a Comment