ಬೆಂಗಳೂರು: ಕನ್ನಡ ಚಿತ್ರ ನಟ, ಚೇತನ್ ಅಹಿಂಸಾರನ್ನು ಹಿಂದುತ್ವದ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿರುವುದಕ್ಕೆ ಬಂಧಿಸಲಾಗಿದೆ. ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ.
ನಟ ಚೇತನ್ ಕುಮಾರ್ ಹಿಂದೂ ಧರ್ಮ, ಬ್ರಾಹ್ಮಣ್ಯದ ವಿರುದ್ಧ ಪೋಸ್ಟ್ ಹಾಕುತ್ತಿರುವುದು ಇದೇ ಮೊದಲಲ್ಲ. ಆದರೆ ಈಗ ಹಾಕಿರುವ ಒಂದು ಪೋಸ್ಟ್ ಅವರನ್ನು ಜೈಲು ಸೇರುವಂತೆ ಮಾಡಿದೆ. ಈ ಪೋಸ್ಟ್‌ನ ಕಮೆಂಟ್ ಸೆಕ್ಷನ್‌ನಲ್ಲಿಯೂ ಪೋಸ್ಟ್ ಬಗ್ಗೆ ಭಾರೀ ಚರ್ಚೆಯಾಗಿದೆ.
ಪೋಸ್ಟ್‌ನಲ್ಲಿ, "ಹಿಂದುತ್ವವನ್ನು ಸುಳ್ಳಿನ ಆಧಾರದ ಮೇಲೆ ಕಟ್ಟಲಾಗಿದೆ" ಎಂದು ಬರೆಯಲಾಗಿದೆ. ರಾಮನು
ರಾವಣನನ್ನು ಸೋಲಿಸಿ ಅಯೋಧ್ಯಗೆ ಹಿಂದಿರುಗಿದಾಗ ಭಾರತೀಯ 'ರಾಷ್ಟ್ರ' ಪ್ರಾರಂಭವಾಯಿತು. ಇದು ಒಂದು ಸುಳ್ಳು. ಬಾಬರಿ ಮಸೀದಿ ರಾಮನ ಜನ್ಮಭೂಮಿ ಇದು ಒಂದು ಸುಳ್ಳು,
ಉರಿಗೌಡ ಮತ್ತು ನಂಜೇಗೌಡರು ಟಿಪ್ಪುವನ್ನು ಕೊಂದರು ಇದು ಕೂಡ ಒಂದು ಸುಳ್ಳು.ಹಿಂದುತ್ವವನ್ನು ಸತ್ಯದಿಂದ ಸೋಲಿಸಬಹುದು. ಸತ್ಯವೇ ಸಮಾನತೆ
ಚೇತನ್ ಅಹಿಂಸಾ
ಚಲನಚಿತ್ರ ನಟ, ಸಾಮಾಜಿಕ ಹೋರಾಟಗಾರರು ಎಂದು ಪೋಸ್ಟ್ ಹಾಕಿದ್ದರು.














