ಸೋಮೇಶ್ವರ: ಶ್ರೀ ರಕ್ತೇಶ್ವರೀ ದೈವಸ್ಥಾನ(ರಿ)ಇಲ್ಲಿನ ಶ್ರೀ ನಾಗ ದೇವರ ಪುನರ್ ಪ್ರತಿಷ್ಠೆ ಹಾಗೂ ಶ್ರೀ ರಕ್ತೇಶ್ವರಿ ಗುಳಿಗ ದೈವಗಳಿಗೆ ಬ್ರಹ್ಮಕಲಶ, ಪಂಚವಿಂಶತಿ ಕಲಶಾಭಿಷೇಕ ಮತ್ತು ವಾರ್ಷಿಕ ನೇಮೋತ್ಸವವು 2023 ಮಾರ್ಚ್ 21 ರಿಂದ 25 ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.
ಮಾ 21ಮಂಗಳವಾರ ಸಂಜೆ 4 ಗಂಟೆಗೆ ಬೀರಿ ಗಣೇಶ ಮಂದಿರದಿಂದ ಶ್ರೀ ಕ್ಷೇತ್ರಕ್ಕೆ ಶ್ರೀ ವೇದಮೂರ್ತಿ ಲಕ್ಷ್ಮೀನಾರಾಯಣ ಆಸ್ರಣ್ಣರು ಹಾಗೂ ಶ್ರೀಶ್ರೀಶ್ರೀ ಕೌಸ್ತುಭ ಕರ್ಮಯೋಗಿ ಮೋಹನ ದಾಸ ಪರಮಹಂಸ ಸ್ವಾಮೀಜಿ ಇವರ ದಿವ್ಯ ಉಪಸ್ಥಿತಿಯಲ್ಲಿ ಹೊರ ಕಾಣಿಕೆ ಶೋಭಾಯಾತ್ರೆ ನಡೆಯಲಿದೆ.
ಮಾ 23 ಗುರುವಾರ ಬೆಳಿಗ್ಗೆ 10 ರಿಂದ 11:30 ರ ಒಳಗೆ ಒದಗುವ ವೃಷಭ ಲಗ್ನದಲ್ಲಿ ನಾಗಶೀಲ ಪುನರ್ ಪ್ರತಿಷ್ಠೆ ,ಪ್ರತಿಷ್ಠಾ ಕಲಶಾಭಿಷೇಕ , ಪಂಚವಿಂಶತಿ ಕಲಶಾಭಿಷೇಕ ನಡೆಯಲಿದೆ
ಮಾ.24 ಶುಕ್ರವಾರ ಬೆಳಿಗ್ಗೆ 11 ಗಂಟೆಗೆ
ವೃಷಭ ಲಗ್ನದಲ್ಲಿ ಶ್ರೀ ರಕ್ತೇಶ್ವರಿ ಗುಳಿಗ ದೈವಗಳಿಗೆ ಬ್ರಹ್ಮಕಲಶ ಪಂಚ ವಿಂಶತಿ ಕಲಶಾಭಿಷೇಕ ನಡೆಯಲಿದೆ.
ಮಾ.25 ಶನಿವಾರ ರಾತ್ರಿ 8 ಗಂಟೆಯಿಂದ ವರ್ಷಾವಧಿ ನೇಮೋತ್ಸವ ನಡೆಯಲಿದೆ.ಪ್ರತಿದಿನ ವಿವಿಧ ವೈದಿಕ,ಅನ್ನಸಂತರ್ಪಣೆ, ಧಾರ್ಮಿಕ ಸಾಂಸ್ಕೃತಿ ಕಾರ್ಯಕ್ರಮಗಳು ನಡೆಯಲಿದೆ.
ಮಾ.26 ಆದಿತ್ಯವಾರ ರಕ್ತೇಶ್ವರಿ ಬಳಗ ಸೋಮೇಶ್ವರ (ರಿ) ಇದರ 23 ನೇ ವಾರ್ಷಿಕೋತ್ಸವ ನಡೆಯಲಿರುವುದು
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 8:00 ಗಂಟೆಗೆ ಶಾರದ ಆರ್ಟ್ಸ್ ಕಲಾವಿದ (ರಿ) ಮಂಜೇಶ್ವರ ಅಭಿನಯ ಮಲ್ಪುನ ಯಾನ ಉಲ್ಲೆತ್ತ ತುಳು ನಾಟಕ ನಡೆಯಲಿದೆ ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.














