ಮಂಗಳೂರು: ಗಾಯಕಿ ಹಾಗೂ ನಿರೂಪಕಿ ಅಖಿಲಾ ಪಜಿಮಣ್ಣು (Akhila Pajimannu) ಸಂಸಾರ (divorce) ಮುರಿದುಬಿದ್ದಿದೆ. ಕನ್ನಡ ಕೋಗಿಲೆ (Kannada Kogile) ಸೀಸನ್ 1 ಹಾಗೂ ಸೀಸನ್ 2 ರನ್ನರ್ ಅಪ್ ಆಗಿದ್ದ ಅಖಿಲಾ ತಮ್ಮ ಸುಮಧುರ ಕಂಠದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದರು. ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಅಮೆರಿಕದಲ್ಲಿ ವಾಸವಿದ್ದ ಧನಂಜಯ್ ಶರ್ಮ (Dhananjai Sharma) ಅವರನ್ನು ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು.
ಪುತ್ತೂರು ಕೋರ್ಟ್‌ನಲ್ಲಿ (Puttur Court) ಇಬ್ಬರೂ ಕೂಡ ತಮ್ಮ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇಬ್ಬರೂ ಒಪ್ಪಿಗೆಯಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ. ‘ಕನ್ನಡ ಕೋಗಿಲೆ’ ಕಾರ್ಯಕ್ರಮದ
ಮೂಲಕ ಮನೆ ಮಾತಾಗಿರುವ ಗಾಯಕಿ ಅಖಿಲಾ ಪಜಿಮಣ್ಣು 2021ರ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರೆ, ಅದರ ಮರುವರ್ಷ ವಿವಾಹವಾಗಿದ್ದರು. ನಿಶ್ಚಿತಾರ್ಥ ಹಾಗೂ ಮದುವೆಯ ವಿಡಿಯೋವನ್ನು ಅವರು ತಮ್ಮ ಇನ್ಸ್‌ಟಾಗ್ರಾಮ್ ಪೇಜ್‌ನಲ್ಲಿ ಹಂಚಿಕೊಂಡಿದ್ದರು.















