ಮೈಸೂರು : ಕಬಿನಿ ಶಕ್ತಿಮಾನ್ ಎಂದೇ ಖ್ಯಾತಿ ಪಡೆದಿದ್ದ ನೀಳ ದಂತದ, ಸುಂದರ ನಡಿಗೆಯ ಭೋಗೇಶ್ವರ ಹೆಸರಿನ ಆನೆ ನಿಧನ ಹೊಂದಿದೆ. ಗುಂಡ್ರೆ ಅರಣ್ಯ ವ್ಯಾಪ್ತಿಯಲ್ಲಿ ಆನೆಯ ಕಳೆಬರಹ ಪತ್ತೆಯಾಗಿದ್ದು, ಕಬಿನಿ ಹಿನ್ನಿರಿನಲ್ಲಿ ಪ್ರವಾಸಿಗರಿಗೆ ದರ್ಶನ ನಿಡ್ತಿದ್ದ ಭೋಗೇಶ್ವರ ವಯೋಸಹಜ ನಿಧನ ಹೊಂದಿದೆ.
ಈ ಭೋಗೇಶ್ವರ ತನ್ನ ನೀಳ ದಂತದಿಂದಾಗಿಯೇ ಸಾಕಷ್ಟು ಖ್ಯಾತಿ ಪಡೆದಿದ್ದ. 4 ಅಡಿಗೂ ಉದ್ದದ ಸುಂದರವಾದ ಎರಡು ನೀಳ ದಂತವಿತ್ತು.
ಅಲ್ಲದೇ ಭೋಗೇಶ್ವರ ಆನೆ ಸೋಶಿಯಲ್ ಮಿಡಿಯಾದಲ್ಲಿ ಸಾಕಷ್ಟು ಸೆನ್ಸೇಶನ್
ಸೃಷ್ಟಿಸಿತ್ತು. ಎಲ್ಲಾ ಜಾಲತಾಣಗಳಲ್ಲಿ ಭೋಗೇಶ್ವರ ಫೋಟೋ ಸಾಕಷ್ಟು ಸದ್ದು ಮಾಡಿತ್ತು. ಭೋಗೇಶ್ವರ ಫೋಟೋ ಲಕ್ಷಾಂತರ ಲೈಕ್ ಪಡೆದಿತ್ತು.
ಭೋಗೇಶ್ವರ ನಿಧನಕ್ಕೆ ಪ್ರಾಣಿ ಪ್ರಿಯರು ಕಂಬನಿ ಮಿಡಿದ್ದಾರೆ.ಅರಣ್ಯ ಇಲಾಖೆಯ ಸಿಬ್ಬಂದಿಗಳು ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಾರೆ.
















