ಇಂದು ಆರ್ಯ ಈಡಿಗ ಸಮಾವೇಶದಿಂದ ಬೃಹತ್ ಸಮಾವೇಶ - ಮುಖ್ಯಮಂತ್ರಿ,ಉಪ ಮುಖ್ಯಮಂತ್ರಿ,ಶಿವರಾಜ್‌ಕುಮಾರ್ ಸೇರಿದಂತೆ ಹಲವು ನಾಯಕರು ಭಾಗಿ.

Coastal Bulletin
ಇಂದು ಆರ್ಯ ಈಡಿಗ ಸಮಾವೇಶದಿಂದ ಬೃಹತ್ ಸಮಾವೇಶ - ಮುಖ್ಯಮಂತ್ರಿ,ಉಪ ಮುಖ್ಯಮಂತ್ರಿ,ಶಿವರಾಜ್‌ಕುಮಾರ್ ಸೇರಿದಂತೆ ಹಲವು ನಾಯಕರು ಭಾಗಿ.

ಬೆಂಗಳೂರು : ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ ಸ್ಥಾಪನೆಯಾಗಿ 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬೆಂಗಳೂರು ಅರಮನೆ ಮೈದಾನದಲ್ಲಿ ಡಿ. 10ರಂದು ಬೆಳಗ್ಗೆ 11 ಗಂಟೆಗೆ ಅಮೃತ ಮಹೋತ್ಸವ ಹಾಗೂ ಈಡಿಗ ಸೇರಿ ಇತರ 25 ಪಂಗಡಗಳ ಜಾಗೃತ ಸಮಾವೇಶ ಉದ್ಘಾಟನೆಗೊಂಡಿತು. ಈಡಿಗ ಸಮಾಜದ ಸಂಘಟನೆ ಹಾಗೂ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಈ ಸಮಾವೇಶ ನಡೆಸಲಾಗುತ್ತಿದೆ. ಸೇಂದಿ, ಸಾರಾಯಿ ಮಾರಾಟ ನಿಷೇಧಿಸಿದ್ದ ಸಂದರ್ಭದಲ್ಲಿ 28 ವರ್ಷದ ಹಿಂದೆ ಸಮಾವೇಶ ನಡೆಸಲಾಗಿತ್ತು. ಎರಡನೇ ಬಾರಿಗೆ ಆಯೋಜನೆ ಆಗುತ್ತಿದೆ ಎಂದು ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಕಾರ್ಯದರ್ಶಿ ಎ.ನಾಗರಾಜ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಸಂಘದ ರಾಜ್ಯಾಧ್ಯಕ್ಷ ಡಾ. ಎಂ. ತಿಮ್ಮೇಗೌಡ ಅಧ್ಯಕ್ಷತೆಯ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಶಾಸಕ ಮಧುಬಂಗಾರಪ್ಪ,ಚಲನಚಿತ್ರ ನಟರಾದ ಶಿವರಾಜ್‌ಕುಮಾರ್,ಶ್ರೀ ಮುರಳಿ,ಸಾಧುಕೋಕಿಲ ಸೇರಿ ಎಲ್ಲಾ ರಾಜಕೀಯ ಪಕ್ಷದ ರಾಜಕೀಯ ಪ್ರಮುಖರು, ಜನಪ್ರತಿನಿಧಿಗಳು ಭಾಗವಹಿಸಿದ್ದಾರೆ. ಸುಮಾರು 2 ಲಕ್ಷ ಜನರು ಸೇರಿರುವ ಈ ಬೃಹತ್ ಸಮಾವೇಶದಲ್ಲಿ ಈಡಿಗರ ಅಭಿವೃದ್ಧಿ ನಿಗಮಕ್ಕೆ ರಾಜ್ಯ ಸರ್ಕಾರ 1 ಸಾವಿರ ಕೋಟಿ ರೂ. ಅನುದಾನ ಕಲ್ಪಿಸಬೇಕು. ಸೇಂದಿ, ಸಾರಾಯಿ ಮಾರಾಟ ನಿಷೇಧದಿಂದಾಗಿ ಅನೇಕರು ಕುಲಕಸುಬು ಬಿಟ್ಟು ಬೀದಿಬದಿ ವ್ಯಾಪಾರ ಮಾಡುವಂತಾಗಿದೆ. ಅವರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಉದ್ಯೋಗ, ಶೈಕ್ಷಣಿಕ ಪ್ರೋತ್ಸಾಹಧನ ನೀಡಬೇಕು ಎಂಬುದು ಸೇರಿ ಇತರೆ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಮನದಟ್ಟು ಮಾಡಲಾಯಿತು.

ಸಮಾವೇಶಕ್ಕೆ ಪರ್ಯಾಯವಾಗಿ ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದ ಕೃಷ್ಣದೇವರಾಯ ವೃತ್ತದಲ್ಲಿ ಆರ್ಯ ಈಡಿಗ ಸಮಾಜದ ಪ್ರಣವಾನಂದ ಸ್ವಾಮೀಜಿಗಳು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಬೆಂಗಳೂರಿನಲ್ಲಿ ಈಡಿಗ ಸಮಾವೇಶವನ್ನು ಆಯೋಜಿಸಲಾಗಿದೆ. ಆದರೆ ಸ್ವತಃ ಈಡಿಗರೇ ಆಗಿರುವ ಪರಿಷತ್ ಸದಸ್ಯ ಹರಿಪ್ರಸಾದ್ ಅವರು ಇದರ ವಿರುದ್ಧ ತಿರುಗಿಬಿದ್ದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ  ವಿರುದ್ಧವೂ ಪರೋಕ್ಷ ವಾಗ್ದಾಳಿ ಡೆಸಿದ್ದಾರೆ. ಇದು ರಾಜಕೀಯ ಪ್ರೇರಿತ ಮತ್ತು ರಾಜಕೀಯ ಕುತಂತ್ರದಿಂದ ಸಮಾವೇಶ ಆಯೋಜಿಸಲಾಗಿದೆ ಎಂದು ಗುಡುಗಿದ್ದಾರೆ. ಬಿ.ಕೆ.ಹರಿಪ್ರಸಾದ್​ರನ್ನು​​​ ಮೂಲೆಗುಂಪು ಮಾಡಲಾಗುತ್ತಿದೆ. ಹಿಂದುಳಿದ ವರ್ಗದ ನಾಯಕನಾಗಿ ಬೆಳೆಯದಂತೆ ಮೂಲೆಗುಂಪು ಮಾಡ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ, ಸಚಿವ ಮಧು ಬಂಗಾರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು. ಉದ್ದೇಶಪೂರ್ವಕವಾಗಿ ಹರಿಪ್ರಸಾದ್​ರನ್ನು ಸಮಾವೇಶದಿಂದ ದೂರವಿಡಲಾಗಿದೆ. ಮಧು ಬಂಗಾರಪ್ಪ ಬಳಸಿಕೊಂಡು ಈಡಿಗ ಸಮಾಜ ಒಡೆಯಲು ಸಿಎಂ ಯತ್ನ ಮಾಡ್ತಿದ್ದಾರೆ ಎಂದು ಆರೋಪಿಸಿದರು.


ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಬಿಕೆ

ಹರಿಪ್ರಸಾದ್, ದೊಡ್ಡ ದೊಡ್ಡ ನಾಯಕರು ಈಡಿಗ ಸಂಘವನ್ನು ಕಟ್ಟಿದ್ದಾರೆ. ಆದರೆ ಇತ್ತೀಚೆಗೆ ಬಂದವರು ಸಮಾಜದಲ್ಲಿ ಏನು ಮಾಡಿದ್ದಾರೆ. ರಾಜಕೀಯ ಕುತಂತ್ರದ ಸಮಾವೇಶ, ಇದರಿಂದ ಒಳ್ಳೆಯದಾಗಲ್ಲ. ಗುರುನಾರಾಯಣ ಅಧ್ಯಯನ ಪೀಠಕ್ಕೆ ಅನುದಾನವನ್ನು ಕೊಟ್ಟಿಲ್ಲ. ಸಮಾಜದ ಹಿತದೃಷ್ಟಿಯಿಂದ ಏನು ಮಾಡಿದ್ದಾರೆಂದು ಹೇಳಬೇಕು. ರಾಜಕೀಯ ಪ್ರೇರಿತ ಸಮಾವೇಶದಲ್ಲಿ ನಾವು ಭಾಗಿಯಾಗುವುದಿಲ್ಲ. ಪ್ರಣಾವನಂದ ಸ್ವಾಮೀಜಿ ಉಪವಾಸ ಸತ್ಯಾಗ್ರಹಕ್ಕೆ ಶುಭವಾಗಲಿ ಎಂದು ಹೇಳಿದರು.ಸಮಾಜ ಒಡೆಯೋ ಪ್ರಯತ್ನ ಮಾಡಿದ್ರೆ ಮುಂದೆ ಏನಾಗುತ್ತೆ ನೋಡೋಣ. ಪ್ರಣಾವನಂದ ಸ್ವಾಮೀಜಿ ಸತ್ಯಾಗ್ರಹ ಸಮುದಾಯದ ಪರ. ಹಿಂದುಳಿದ, ಅತಿ ಹಿಂದುಳಿದವರ ಪರ ಸತ್ಯಾಗ್ರಹ ಮಾಡುತ್ತಿದ್ದು, ಅವರಿಗೆ ಒಳ್ಳೆಯಾದಗಲಿ. ಪ್ರಣಾವನಂದ ಸ್ವಾಮೀಜಿಗೆ ಜಾಸ್ತಿ ಹುಳುಕು ಗೊತ್ತಿದೆ. ಅದಕ್ಕಾಗಿ ಅವರನ್ಮ ದೂರ ಇಟ್ಟಿದ್ದಾರೆ ‌. ಸ್ವಾಮೀಜಿ ನಮ್ಮ‌ಜಾತಿಯವರು ಅಲ್ಲ ಅಂದ್ರು. ಅವರ ಪಾದ ಪೂಜೆ ಮಾಡಿದವರು ಯಾರು ಎಂದು ಪ್ರಶ್ನಿಸಿದ ಹರಿಪ್ರಸಾದ್, ಇವರೇನು ಜಾತಿ ಪ್ರಮಾಣ ಪತ್ರ ಕೊಡುವುದಕ್ಕೆ ತಹಶೀಲ್ದಾರ್​ ಏನು ಎಂದು ವಾಗ್ದಾಳಿ ನಡೆಸಿದರು.

Leave a Comment