2 ಮಕ್ಕಳ ತಾಯಿ ಮೇಲಿನ ಹುಚ್ಚು ಪ್ರೀತಿ; ಓಯೊ ರೂಮ್‌ನಲ್ಲಿ ಬೆತ್ತಲೆಗೊಳಿಸಿ ಕೊಲೆ ಮಾಡಿದ ಪ್ರಿಯತಮ

Coastal Bulletin
2 ಮಕ್ಕಳ ತಾಯಿ ಮೇಲಿನ ಹುಚ್ಚು ಪ್ರೀತಿ; ಓಯೊ ರೂಮ್‌ನಲ್ಲಿ ಬೆತ್ತಲೆಗೊಳಿಸಿ ಕೊಲೆ ಮಾಡಿದ ಪ್ರಿಯತಮ

ಬೆಂಗಳೂರು: ಎರಡು ಮಕ್ಕಳ ತಾಯಿಯ ಮೇಲಿನ ಹುಚ್ಚು ಪ್ರೀತಿಗೆ ಪಾಗಲ್ ಪ್ರೇಮಿಯೊಬ್ಬ ಬರ್ಬರ ಹತ್ಯೆ ನಡೆಸಿರುವ ಘಟನೆ ಬೆಂಗಳೂರಿನ ಕೆಂಗೇರಿಯಲ್ಲಿ ನಡೆದಿದೆ.

25 ವರ್ಷದ ಇಂಜಿನಿಯರ್ ಯಶಸ್ ಕೊಲೆ ಆರೋಪಿಯಾಗಿದ್ದು, 33 ವರ್ಷದ ಹರಿಣಿ ಮೃತ ಮಹಿಳೆ. ಇಬ್ಬರೂ ಸಹ ಕೆಂಗೇರಿ ನಿವಾಸಿಗಳಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಯಶಸ್ ಸ್ನೇಹಿತರ ಸಂಬಂಧಿಯಾಗಿರುವ ಹರಿಣಿ ಜಾತ್ರೆಯೊಂದರಲ್ಲಿ ಯಶಸ್‌ಗೆ ಪರಿಚಯವಾಗಿ ನಂಬ‌ರ್ ಬದಲಿಸಿಕೊಂಡಿದ್ದರು.

ಹೀಗೆ ಶುರುವಾದ ಸ್ನೇಹ ಕಾಮಕ್ಕೆ ತಿರುಗಿ ಇಬ್ಬರೂ ಆಗಾಗ ಭೇಟಿಯಾಗುತ್ತಿದ್ದರು. ಇತ್ತ ಯಶಸ್ ಹರಿಣಿಯ ಮೇಲೆ ವ್ಯಾಮೋಹ ಬೆಳೆಸಿಕೊಂಡಿದ್ದ. ಇಬ್ಬರ ನಡುವೆ ಜಗಳ ನಡೆದಿದ್ದು, ಮಾತನಾಡುವ ಸಲುವಾಗಿ

ಸ್ಥಳೀಯ ಓಯೊ ರೂಮಿಗೆ ಕರೆಸಿಕೊಂಡಿದ್ದ. ಬಳಿಕ ಲೈಂಗಿಕ ಕ್ರಿಯೆ ನಡೆಸಿ ಆಕೆಗೆ ನೀನು ನನಗೆ ಸಿಗದ ಮೇಲೆ ಇನ್ಯಾರಿಗೂ ಸಿಗಬಾರದು ಎಂದು ಹೇಳಿ ಆಕೆಯನ್ನು ಹತ್ಯೆಗೈದಿದ್ದಾನೆ.

ಹರಿಣಿಯನ್ನು ಕೊಲ್ಲಲೆಂದೇ ಚಾಕು ಖರೀದಿಸಿದ್ದ ಯಶಸ್ 17 ಬಾರಿ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಸದ್ಯ ಸುಬ್ರಮಣ್ಯಪುರ ಪೊಲೀಸರು ಆರೋಪಿ ಯಶಸ್‌ನನ್ನು ವಿಚಾರಣೆ ಮಾಡುತ್ತಿದ್ದು, ತನಿಖೆ ಮುಂದುವರೆಸಿದ್ದಾರೆ. ಇನ್ನು ಇಂದು ಆರೋಪಿಯನ್ನು ಪೊಲೀಸರು ಕೋರ್ಟ್ ಗೆ ಹಾಜರು ಪಡಿಸಲಿದ್ದಾರೆ.

Leave a Comment