ಗಂಡು ಮಗು ಆಗ್ಲಿಲ್ಲ ಅಂತ ಗರ್ಭಿಣಿ ಪತ್ನಿ, ಇಬ್ಬರು ಹೆಣ್ಣುಮಕ್ಕಳ ಹತ್ಯೆಗೈದ ಪಾಪಿ

Coastal Bulletin
ಗಂಡು ಮಗು ಆಗ್ಲಿಲ್ಲ ಅಂತ ಗರ್ಭಿಣಿ ಪತ್ನಿ, ಇಬ್ಬರು ಹೆಣ್ಣುಮಕ್ಕಳ ಹತ್ಯೆಗೈದ ಪಾಪಿ

ಹೈದರಾಬಾದ್: ಗಂಡು ಮಗು ಆಗ್ಲಿಲ್ಲ ಅಂತ ಬೇಸರಗೊಂಡು ಗರ್ಭಿಣಿ ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ವ್ಯಕ್ತಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ (Telangana) ವಾರಂಗಲ್‌ನಲ್ಲಿ ನಡೆದಿದೆ.

ಫರ್ಹತ್‌ (26) ಮತ್ತು ಆಕೆಯ ಇಬ್ಬರು ಅಪ್ರಾಪ್ತ ಪುತ್ರಿಯರಾದ ಉಮೇರಾ (8), ಆಯೇಷಾ (6) ವಾರಂಗಲ್-ಖಮ್ಮಾಮ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಈಜುಕೊಳದಲ್ಲಿ ಶವವಾಗಿ ಪತ್ತೆಯಾಗಿದ್ದರು. ರಾತ್ರಿ ಆಕಸ್ಮಿಕವಾಗಿ ಈಜುಕೊಳಕ್ಕೆ ಜಾರಿದ ನಂತರ ಮೂವರು ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪತಿ ಅಜರುದ್ದೀನ್ ತಿಳಿಸಿದ್ದ.

ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಅಜರುದ್ದೀನ್‌ ಕೊಲೆಗಾರ ಎಂಬುದು ಗೊತ್ತಾಗಿದೆ. ಅಜರುದ್ದೀನ್, ಪತ್ನಿ ಫರ್ಹತ್ ಮತ್ತು ಅವರ ಹೆಣ್ಣುಮಕ್ಕಳನ್ನು ಕೊಳಕ್ಕೆ ಕರೆದೊಯ್ದು ನೀರಿಗೆ ತಳ್ಳಿ ಹತ್ಯೆ ಮಾಡಿದ್ದಾನೆ. ಕೃತ್ಯಕ್ಕೂ ಮೊದಲು ಸ್ಥಳದಲ್ಲಿದ್ದ

ಸಿಸಿಟಿವಿ ಕ್ಯಾಮೆರಾಗಳನ್ನು ಆಫ್‌ ಮಾಡಲಾಗಿತ್ತು.

ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪತ್ತೆಹಚ್ಚಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ಪ್ರಸ್ತುತ ಆರೋಪಿ ಪರಾರಿಯಾಗಿದ್ದಾನೆ.

ಅಜರುದ್ದೀನ್ ಮತ್ತು ಫರ್ಹತ್‌ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದರು. ಫರ್ಹತ್ ಮತ್ತೊಂದು ಮಗುವಿಗೆ ಗರ್ಭಧರಿಸಿದ್ದರು. ಅದು ಕೂಡ ಹೆಣ್ಣು ಎಂಬುದು ಗೊತ್ತಾಗಿತ್ತು. ಇದೇ ವಿಚಾರವಾಗಿ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಅಜರುದ್ದೀನ್ ಗಂಡು ಮಗುವನ್ನು ಬಯಸಿದ್ದ. ಗರ್ಭಧಾರಣೆಯನ್ನು ಅಂತ್ಯಗೊಳಿಸಲು ಫರ್ಹತ್‌ ಮೇಲೆ ಒತ್ತಡ ಹಾಕಿದ್ದ. ಅದಕ್ಕೆ ಪತ್ನಿ ನಿರಾಕರಿಸಿದ್ದಳು. ಇದರಿಂದ ಬೇಸತ್ತು ಕೃತ್ಯ ಎಸಗಿದ್ದಾನೆ.

Leave a Comment