Coastal Bulletin

ಬೆಂಗಳೂರು : ಮೂರು ಬಾರಿಯ ಚಾಂಪಿಯನ್ ಪಾಟ್ನಾ ಪೈರೇಟ್ಸ್ ಬುಧವಾರ ಯುಪಿ ಯೋದ್ಧವನ್ನು 38-27 ಅಂಕಗಳಿಂದ ಸೋಲಿಸಿದರೆ, ದಬಾಂಗ್ ಡೆಲ್ಲಿ KC 40-35 ರಲ್ಲಿ ಬೆಂಗಳೂರು ಬುಲ್ಸ್ ಅನ್ನು ಸೋಲಿಸಿ ಪ್ರೊ ಕಬಡ್ಡಿ ಲೀಗ್ ಸೀಸನ್ 8ರ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಮೊದಲ ಸೆಮಿಫೈನಲ್‌ನಲ್ಲಿ, ಸ್ಟಾರ್ ಡಿಫೆಂಡರ್ ಮೊಹಮ್ಮದ್ರೇಜಾ ಶಾದ್ಲೌಯಿ ಮತ್ತು ಸುನೀಲ್ ಅವರ  ಹೈ 5 ಹಾಗೂ ರೈಡರ್‌ಗಳಾದ ಸಚಿನ್ (7 ಅಂಕ) ಮತ್ತು ಗುಮನ್ ಸಿಂಗ್ (8 ಅಂಕ) ಯುಪಿ ಯೋಧಾವನ್ನು ಸೋಲಿಸಿ ಫೈನಲ್ ಪ್ರವೇಶ ಮಾಡಿತು.

ಎರಡನೇ ಸೆಮಿಫೈನಲ್

ಪಂದ್ಯದಲ್ಲಿ  ದಬಾಂಗ್ ಡೆಲ್ಲಿಯು ಬೆಂಗಳೂರು ಬುಲ್ಸ್ ವಿರುದ್ಧ ಉತ್ತಮ ಪ್ರದರ್ಶನ ನೀಡಿ ಪಿಕೆಎಲ್‌ 8ರ ಫೈನಲ್ ಗೆ ಪ್ರವೇಶ ಪಡೆಯಿತು.ಬೆಂಗಳೂರು ಪರ ಪವನ್ ಶರಾವತ್ ಅತ್ಯುತ್ತಮ ಆಟ ( 18 ಅಂಕ) ಪಡೆದರೂ ಫೈನಲ್ ಪ್ರವೇಶ ಪಡೆಯುವಲ್ಲಿ ವಿಫಲವಾಯಿತು.

Leave a Comment