ಬಂಟ್ವಾಳ: ದೇಶದಲ್ಲಿ ಕಾರ್ಮಿಕ ಹೋರಾಟ ಮತ್ತು ರೈತ ಹೋರಾಟಗಳಲ್ಲಿ ಸ್ವಾಭಿಮಾನ ಮತ್ತು ಇಚ್ಛಾಶಕ್ತಿಯಿಂದ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ ಡಾ.ಅಮ್ಮೆಂಬಳ ಬಾಳಪ್ಪರು ಇತರ ಹೋರಾಟಗಾರರಿಗೆ ಸ್ಪೂರ್ತಿಯಾಗಿದ್ದಾರೆ ಎಂದು ಜಾನಪದ ವಿ.ವಿ. ವಿಶ್ರಾಂತ ಕುಲಪತಿ ಡಾ. ಚಿನ್ನಪ್ಪ ಗೌಡ ಹೇಳಿದರು. ಇಲ್ಲಿನ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯ ಸಭಾಂಗಣದಲ್ಲಿ ಮಂಗಳವಾರ ನಡೆದ ಸ್ವಾತಂತ್ರ್ಯ ಹೋರಾಟಗಾರ ಡಾ.ಅಮ್ಮೆಂಬಳ ಬಾಳಪ್ಪ ಇವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿರಿಯ ಪತ್ರಕರ್ತ ಅಮ್ಮೆಂಬಳ ಆನಂದಹಳೆಯ ನೆನೆಪುಗಳನ್ನು ತೆರೆದಿಟ್ಟರು.
ಬೈದ್ಯಶ್ರೀ ಸಾಂಸ್ಕೃತಿಕ ಪ್ರತಿಷ್ಠಾನ ರೂವಾರಿ ದಾಮೋದರ ಕಲ್ಮಾಡಿ, ಪ್ರಮುಖರಾದ ಜಯಪ್ರಕಾಶ್ ನಾರಾಯಣ, ಹರೀಶ್ ಕರ್ಕೆರಾ, ಪೆರಂಪಳ್ಳಿ ಚೆಲುವರಾಜ್, ಡಾ. ಪಾಂಡುರಂಗ ನಾಯಕ್, ಪ್ರೊ. ಕೃಷ್ಣಮೂತರ್ಿ, ಪ್ರೊ. ನಂದಕಿಶೋರ್, ಸುಭಾಷ್ ರೈ, ಶಾಂತಪ್ಪ, ಚೇತನ್ ಮುಂಡಾಜೆ, ಡಾ. ಸಾಯಿಗೀತಾ, ಡಾ. ಜ್ಯೋತಿ ಚೇಳ್ಯಾರು, ದೇವಿಕಾ, ಡಾ. ಅಮ್ಮೆಂಬಳ ಬಾಳಪ್ಪ ಸೇವಾ ಟ್ರಸ್ಟ್ನ
ಕಾರ್ಯದರ್ಶಿ ಉಮೇಶ್ ಪಿ.ಕೆ., ಲಯನ್ಸ್ ಮಾಜಿ ಅಧ್ಯಕ್ಷ ದಾಮೋದರ ಬಿ.ಎಂ., ಕುಲಾಲ ಯುವ ವೇದಿಕೆ ಜಿಲ್ಲಾಧ್ಯಕ್ಷ ಸುಕುಮಾರ್ ಬಂಟ್ವಾಳ, ಮಹೇಂದ್ರನಾಥ ಸಾಲೆತ್ತೂರು, ಡಾ. ನವೀನ್ ಕುಮಾರ್ ಮರಿಕೆ ಮತ್ತಿತರರು ಇದ್ದರು. ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕರಾಮ ಪೂಜಾರಿ ಸ್ವಾಗತಿಸಿ, ಪ್ರಾಸ್ತ್ತಾವಿಕ ಮಾತನಾಡಿದರು. ಕೇಂದ್ರದ ಕಾರ್ಯದರ್ಶಿ ಡಾ. ಆಶಾಲತಾ ಸುವರ್ಣ ವಂದಿಸಿದರು.














