ಬಿ.ಸಿ.ರೋಡ್ : ಬಾಳಪ್ಪರು ನನಗೆ ಗುರುಸಮಾನರು, ಸಾಮಾಜಿಕ ಬದುಕಿನ ಬಗ್ಗೆ ನಾವು ಚರ್ಚೆ ನಡೆಸುತ್ತಿದ್ದೇವೆ. ಸ್ವಾತಂತ್ರ್ಯ ಹೋರಾಟಗಾರರನ್ನು ಮರೆಯಬಾರದು. ಜಾತಿಭಾಷೆ ಧರ್ಮ ಮೀರಿ ಸಾಮಾಜಿಕ ಹೋರಾಟದಲ್ಲಿ ತೊಡಗಿಸಿಕೊಂಡ ವ್ಯಕ್ತಿಯಾಗಿ ಮೇಲ್ಪಂಕ್ತಿಯನ್ನು ಹಾಕಿದ ವ್ಯಕ್ತಿಯಾಗಿದ್ದರು ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.
ಅವರು ಬಂಟ್ವಾಳ ಕುಲಾಲ ಸುಧಾರಕ ಸಂಘ ಇದರ ವತಿಯಿಂದ ಪೊಸಳ್ಳಿ ಸಮುದಾಯ ಭವನದಲ್ಲಿ ಬುಧವಾರ ನಡೆದ ಸ್ವಾತಂತ್ರ್ಯ ಹೋರಾಟಗಾರ ಡಾ. ಅಮ್ಮೆಂಬಳ ಬಾಳಪ್ಪ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರ ಬಳಿ ದೀಪ ಬೆಳಗಿಸಿ ನಂತರ ಮಾತನಾಡಿ ಬಾಳಪ್ಪರವರು ಯುವಕರಿಗೆ ಆದರ್ಶವಾಗಿದ್ದು, ಯುವ ಸಮುದಾಯ ಹೆಚ್ಚು ತೊಡಗಿಸಿಕೊಳ್ಳುವ ಅಗತ್ಯವಿದೆ ಎಂದರು.
ನಿವೃತ್ತ ಯೋಧ ಚಂದಪ್ಪ ಮೂಲ್ಯ ಅವರು ಮಾತನಾಡಿ, ಸಂಘಕರಾಗಿದ್ದುಕೊಂಡು ಸಾಮಾಜಿಕ ಬದ್ಧತೆ, ಕ್ರಾಂತಿಕಾರಕ ಬದಲಾವಣೆ ಮಾಡಿದ ವ್ಯಕ್ತಿಯಾಗಿ ಅಮ್ಮೆಂಬಳ ಬಾಳಪ್ಪ ಮಿಂಚಿದವರು ಎಂದು ಅವರು ಹೇಳಿದರು. ಇಂತಹ ವ್ಯಕ್ತಿಗಳನ್ನು ಗುರುತಿಸುವುದು ಗೌರವ ನೀಡುವುದು, ಮುಂದಿನ ಪೀಳಿಗೆಗೆ ನೆನಪು ಉಳಿಯುವ ಕಾರ್ಯಕ್ರಮ ಮಾಡುವುದು ನಮ್ಮ ಆಧ್ಯ ಕರ್ತವ್ಯವಾಗಬೇಕು ಎಂದು ತಿಳಿಸಿದರು.
ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ನಾರಾಯಣ ಸಿ.ಪೆರ್ನೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಾತೃ
ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರಾಜ್ಯ ಹೆದ್ದಾರಿ ರಸ್ತೆ ಮಾರ್ನಬೈಲ್- ಮಂಚಿ ರಸ್ತೆಗೆ "ಡಾ. ಅಮ್ಮೆಂಬಳ ಬಾಳಪ್ಪ ರಸ್ತೆ "ಎಂಬ ನಮಾಂಕಿತ ಮಾರ್ಗಸೂಚಿಯನ್ನು ಅನಾವರಣ ಗೊಳಿಸಲಾಯಿತು.
ಪ್ರಮುಖರಾದ ಬಳಕೆದಾರರ ವೇದಿಕೆ ಸಂಚಾಲಕ ಸುಂದರ್ ರಾವ್, ಬೇಬಿ ಕುಂದರ್, ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ನ್ಯಾಯವಾದಿ ಸುರೇಶ್ ಕುಲಾಲ್, ರಮೇಶ್ ಪಣೋಲಿಬೈಲು, ಪರಮೇಶ್ವರ ಮೂಲ್ಯ, ಅಮ್ಮೆಂಬಳ ಆನಂದ, ಉಪಸ್ಥಿತರಿದ್ದರು. ಕಾರ್ಯಕಾರಿ ಸಮಿತಿ ಸದಸ್ಯ ಸುಕುಮಾರ್ ಬಂಟ್ವಾಳ್ ಸ್ವಾಗತಿಸಿದರು. ಕೋಶಾಧಿಕಾರಿ ಸತೀಶ್ ಕುಲಾಲ್ ಧನ್ಯವಾದ ನೀಡಿದರು. ಕಾರ್ಯಕ್ರಮಕ್ಕೆ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಕುಲಾಲ್ ಅಗ್ರಬೈಲು, ಜತೆಕಾರ್ಯದರ್ಶಿ ಮಾಧವ ಬಿ.ಸಿ.ರೋಡು, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಮಚ್ಚೇಂದ್ರ ಸಾಲ್ಯಾನ್, ರಮೇಶ್ ಸಾಲ್ಯಾನ್, ಮಹಿಳಾ ಘಟಕ ಅಧ್ಯಕ್ಷೆ ಸುಶೀಲಾ ಲಿಂಗಪ್ಪ ಕಾರ್ಯಕ್ರಮಕ್ಕೆ ಸಹಕರಿಸಿದ್ದರು.
ಹೆಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.














