ಭೂಗತ ಲೋಕದ ದಾವೂದ್ ಇಬ್ರಾಹಿಂ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ನನ್ನು ವಿಚಾರಣೆ ನಡೆಸಲಾಗಿದೆ. ಈ ಇಡಿ ಅವರನ್ನು ಬಂಧಿಸಿದೆ.
ನವಾಬ್ ಮಲಿಕ್ ಅವರು ಸರ್ದಾರ್ ಶಹವಲಿ ಖಾನ್ ಮತ್ತು ಸಲೀಂ ಪಟೇಲ್ ಅವರಿಂದ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಕೇವಲ 30 ಲಕ್ಷ ರೂಪಾಯಿಗಳಿಗೆ ಖರೀದಿಸಿದ್ದಾರೆ ಎಂದು ಪ್ರತಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್
ಆರೋಪಿಸಿದ್ದರು.ಇಡಿ ಅಧಿಕಾರಿಗಳು ಮಲಿಕ್ ಮತ್ತು ಅವರಿಗೆ ಆಪ್ತರಾಗಿರುವವರ ಇತರ ಕೆಲವು ವ್ಯವಹಾರಗಳ ಬಗ್ಗೆಯೂ ಪರಿಶೀಲಿಸುತ್ತಿದ್ದಾರೆ. ಮಲೀಕ್ ವಿರುದ್ಧ ಆರೋಪಗಳ ವಿರುದ್ಧ ಇಡಿಗೆ ಸೂಕ್ತ ಸಾಕ್ಷಿಗಳು ಸಿಕ್ಕಿದ ಕಾರಣ ನವಾಬ್ ಮಲಿಕ್ ನನ್ನು ಬಂಧನ ಮಾಡಿದೆ ಇಡಿ.














