ಆಂಟಿಗ್ಯಾ: ಅಂಡರ್ 19 ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ನ್ನು ಸೋಲಿಸಿ ವಿಶ್ವಕಪ್ ತನ್ನದಾಗಿಸಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 189 ರನ್‌ಗಳಿಗೆ ಸರ್ವ ಪತನಗೊಂಡು ಭಾರತಕ್ಕೆ 200 ರನ್‌ಗಳ ಟಾರ್ಗೆಟ್ ನೀಡಿತ್ತು.
ಗೆಲುವಿನ ಗುರಿ ಬೆನ್ನತ್ತಿದ ಭಾರತ ಶೇಖ್ ಶರೀದ್ (50), ನಿಶಾಂತ್ (50 ) ಅತ್ಯಮೋಘ ಬ್ಯಾಟಿಂಗ್
ಪ್ರದರ್ಶನ ಹಾಗೂ ರಾಜ್ ಬಾವ 5 ವಿಕೆಟುಗಳು ಹಾಗೂ ರವಿ ಕುಮಾರ್ ರವರು 4 ವಿಕೆಟ್‍ಗಳನ್ನು ಕಿತ್ತು ಭಾರತ ತಂಡ ವಿಶ್ವಕಪ್ ಗೆಲ್ಲುವಲ್ಲಿ ಮಹತ್ವದ ಪಾತ್ರವಹಿಸಿದರು.ಯಶ್ ದುಲ್ ಭಾರತ ತಂಡದ ನಾಯಕನಾಗಿ ಕಪ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.














