ಹಾಸನ :ಜಿಲ್ಲೆಯ ಕೆಂಚಟ್ಟಹಳ್ಳಿ ಬಳಿ ಲಾರಿ ಮತ್ತು ಕಾರು ನಡುವೆ ಭೀಕರ ಅಪಘಾತದಲ್ಲಿ ಬೆಳ್ತಂಗಡಿಯ ಇಬ್ಬರು ಸಹೋದರರು ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ಸಂಜೆ ಸಂಭವಿಸಿದೆ.
ಬೆಳ್ತಂಗಡಿ ತಾಲ್ಲೂಕಿನ ಇಂದಬೆಟ್ಟು ಗ್ರಾಮದ ಕುತ್ರಬೆಟ್ಟು ಮನೆಯ ದಿ.ಗಣಪ ಗೌಡರ ಮಕ್ಕಳಾದ ಅಣ್ಣ ಜಯಪ್ರಕಾಶ್(25), ತಮ್ಮ ಯೋಗಿಶ್(23) ಸಾವನ್ನಪ್ಪಿದವರು. ಕಾರಿನಲ್ಲಿದ್ದ ಇಬ್ಬರ ಗುರುತು ಪತ್ತೆಯಾಗಿಲ್ಲ. ಜಯಪ್ರಕಾಶ್ ಮತ್ತು ಮನೆಯವರು ಕಳೆಂಜದವರಾಗಿದ್ದು ತಂದೆಯ ಮರಣದ
ಬಳಿಕ ಇಂದಬೆಟ್ಟುವಿನ ಅಜ್ಜನ ಮನೆಯಲ್ಲಿ ಬಂದು ನೆಲೆಸಿದ್ದರು. ಜಯಪ್ರಕಾಶ್ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ತಮ್ಮ ಯೋಗೀಶ್ ಬೆಳ್ತಂಗಡಿಯಲ್ಲಿ ದುರ್ಗಾ ಬಸ್ಸಿನಲ್ಲಿ ಕೆಲಸ ಮಾಡುತ್ತಿದ್ದ. ಗಾಯಾಳುವನ್ನು ಹಾಸನ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆ ನೀಡಲಾಗುತ್ತಿದೆ.














