ಕುಸ್ತಿಪಟು ಸಾಗರ್ ಧನಕರ್ ಕೊಲೆ ಪ್ರಕರಣದ ಪ್ರಮುಖ ಅರೋಪಿ ಅಂತಾರಾಷ್ಟ್ರೀಯ ಖ್ಯಾತಿಯ ಬಾಕ್ಸರ್ ಸುಶೀಲ್ ಕುಮಾರ್ ಜೊತೆಗೆ ದೆಹಲಿ ಪೊಲೀಸರು ಫೋಟೋ-ಸೆಲ್ಫಿ ಸೆಷನ್ ನಡೆಸಿದ ಫೋಟೊಗಳು ವೈರಲ್ ಆದ ಬಳಿಕ ವಿಚಾರಣೆಗೆ ಆದೇಶ ನೀಡಲಾಗಿದೆ.
ಸುಶೀಲ್ ಕುಮಾರ್ ಕೊಲೆ ಪ್ರಕರಣದ ಆರೋಪಿಯಾಗಿದ್ದು, ಆತನ ಜೊತೆಗೆ ಕರ್ತ್ಯವಲ್ಲಿದ್ದ ಪೊಲೀಸರು ಸೆಲ್ಫಿ ತೆಗೆದುಕೊಂಡು ಫೋಟೊಗಳನ್ನು ತಮ್ಮ ವ್ಯಾಟ್ಸಾಪ್ ಗುಂಪುಗಳಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದರು. ಇದು ಜಾಲತಾಣದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ‘ಸುಶೀಲ್ ಅವರನ್ನು ಗಣ್ಯ ಅತಿಥಿ ಎಂಬಂತೆ’ ಹೈಲೈಟ್ ಮಾಡಿದ ಈ ಘಟನೆಯನ್ನು ನೂರಾರು ಜನರು ಟೀಕಿಸಿದ ನಂತರ, ಈಗ ಪೊಲೀಸ್ ಮುಖ್ಯಸ್ಥರು ವಿಚಾರಣೆಗೆ ಆದೇಶಿಸಿದ್ದಾರೆ.
ದೆಹಲಿ ಪೊಲೀಸರ ವಿಶೇಷ
ಘಟಕ ಮತ್ತು 3ನೇ ಬೆಟಾಲಿಯನ್‍ನ ಪೊಲೀಸರು ಸುಶೀಲ್ ಕುಮಾರ್ ಅವರನ್ನು ಶುಕ್ರವಾರ ಬೆಳಿಗ್ಗೆ ಮಂಡೋಲಿ ಜೈಲಿನಿಂದ ತಿಹಾರ್ ಜೈಲಿಗೆ ಕರೆದೊಯ್ಯುತ್ತಿದ್ದಾಗ ಅವರೊಂದಿಗೆ ಫೋಟೊಗಳನ್ನು ತೆಗೆದುಕೊಂಡು ಸೆಲ್ಫಿ ಸೆಷನ್ ನಡೆಸಿದ್ದಾರೆ. ನ್ಯಾಯಾಲಯವು ಸುಶೀಲ್ ನ್ಯಾಯಾಂಗ ಬಂಧನವನ್ನು ಜುಲೈ 9 ರವರೆಗೆ ವಿಸ್ತರಿಸಿದೆ.
ಚಂತ್ರಾಸಾಲ್ ಕ್ರೀಡಾಂಗಣದೊಳಗೆ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಕುಸ್ತಿಪಟು ಸಾಗರ್ ಧನಕರ್ ಕೊಲೆಗೆ ಸಂಬಂಧಿಸಿದಂತೆ ಸುಶೀಲ್ ಅವರನ್ನು ಬಂಧಿಸಲಾಗಿದೆ.















