ಮಂಗಳೂರು:ಪಿಲಿಕುಳದ ಡಾ. ಶಿವರಾಮ ಕಾರಂತ ಜೈವಿಕ ಉದ್ಯಾನವನದಲ್ಲಿ ರಾಣಿ ಹೆಸರಿನ 10 ವರ್ಷ ಪ್ರಾಯದ ಹುಲಿ ಮೂರು ಮರಿಗಳಿಗೆ ಜನ್ಮನೀಡಿ ಆರೋಗ್ಯವಾಗಿದ್ದು ಇನ್ನು 16 ದಿನಗಳಲ್ಲಿ ಕಣ್ಣು ತೆರೆಯಲಿವೆ.ಪಿಲಿಕುಳದಲ್ಲಿ ಈಗ ಹುಲಿಗಳ ಸಂಖ್ಯೆ 13ಕ್ಕೆ ಏರಿದೆ.
ಪಿಲಿಕುಳ ಉದ್ಯಾನವನಕ್ಕೆ ಹೊಸ ಅತಿಥಿಗಳ ಆಗಮನ
ಮಂಗಳೂರು:ಪಿಲಿಕುಳದ ಡಾ. ಶಿವರಾಮ ಕಾರಂತ ಜೈವಿಕ ಉದ್ಯಾನವನದಲ್ಲಿ ರಾಣಿ ಹೆಸರಿನ 10 ವರ್ಷ ಪ್ರಾಯದ ಹುಲಿ ಮೂರು ಮರಿಗಳಿಗೆ ಜನ್ಮನೀಡಿ ಆರೋಗ್ಯವಾಗಿದ್ದು ಇನ್ನು 16 ದಿನಗಳಲ್ಲಿ ಕಣ್ಣು ತೆರೆಯಲಿವೆ.ಪಿಲಿಕುಳದಲ್ಲಿ ಈಗ ಹುಲಿಗಳ ಸಂಖ್ಯೆ 13ಕ್ಕೆ ಏರಿದೆ.
ಕಾಡುಶ್ವಾನ ‘ದೋಳ್’ ಮರಿಗಳ ಜನನ:ಆಂಧ್ರಪ್ರದೇಶದ ವಿಶಾಖಪಟ್ಟಣಂ ಮೃಗಾಲಯದಿಂದ ತರಿಸಲಾದ ಅಳಿವಿನಂಚಿನಲ್ಲಿರುವ ಕಾಡು ಶ್ವಾನಗಳ ವರ್ಗಕ್ಕೆ ಸೇರಿದ ‘ದೋಳ್’ ಇತ್ತೀಚಿಗೆ ಏಳು ಮರಿಗಳಿಗೆ ಜನ್ಮ ನೀಡಿದೆ. ಇದೇ ‘ದೋಳ್’ ಈ ಹಿಂದೆ 5 ಮರಿಗಳಿಗೆ ಜನ್ಮ ನೀಡಿತ್ತು ಇನ್ನೊಂದು ‘ದೋಳ್’ ಹತ್ತು ಮರಿಗಳಿಗೆ ಜನ್ಮ ನೀಡಿತ್ತು. ಪಿಲಿಕುಳದಲ್ಲಿ ‘ದೋಳ್’ ಕಾಡು ಶ್ವಾನಗಳ ಸಂಖ್ಯೆ ೩೩ಕ್ಕೆ ಏರಿದೆ.
‘ರಿಯಾ’ ಪಕ್ಷಿಯ ಜನನ
ಉಷ್ಟ್ರಪಕ್ಷೀಯ ವರ್ಗಕ್ಕೆ ಸೇರಿದ ಬಿಳಿ ರಿಯಾವು ಮೊಟ್ಟೆಗಳನಿಟ್ಟಿದ್ದು, ಅವುಗಳಿಗೆ
ಪ್ರಯೋಗಾಲಯದಲ್ಲಿ ಕೃತಕ ಕಾವು ಕೊಡಲಾಗುತ್ತಿದೆ. ಅದರಲ್ಲಿ ಈಗಾಗಲೇ ಒಂದು ಬಿಳಿ ರಿಯಾ ಮರಿಯು ಜನ್ಮ ತಾಳಿದೆ.
ರೆಟಿಕ್ಯುಲೇಟೆಡ್ ಹೆಬ್ಬಾವು
ಅಪರೂಪದ ಅಳಿವಿನಂಚಿನಲಿರುವ ‘ರೆಟಿಕ್ಯುಲೇಟೆಡ್’ ಹೆಬ್ಬಾವು ಸುಮಾರು 20 ಮೊಟ್ಟೆಗಳನಿಟ್ಟು ಕಾವು ನೀಡುತ್ತಿದೆ. ಇದೇ ಹೆಬ್ಬಾವು ಕಳೆದ ಸಾಲಿನಲ್ಲಿ 17 ಮರಿಗಳಿಗೆ ಜನ್ಮ ನೀಡಿದೆ.
ಕಾಳಿಂಗ ಸರ್ಪ:
ಕೆಲವು ವರ್ಷಗಳ ಹಿಂದೆ ದೇಶದಲ್ಲೇ ಪ್ರಥಮ ಬಾರಿ ವೈಜ್ಞಾನಿಕವಾಗಿ ಕಾಳಿಂಗಗಳ ಸಂತಾನಾಭಿವೃದ್ಧಿ ಪಡಿಸಿದ ಕೀರ್ತಿ ಪಿಲಿಕುಳ ಮೃಗಾಲಯಕ್ಕೆ ಸಲ್ಲುತ್ತದೆ. ಈಗ ಕಾಳಿಂಗ ‘ನಾಗಮಣಿ’ ಮೊಟ್ಟೆಗಳನಿಟ್ಟಿದ್ದು, ಅವುಗಳಿಗೆ ಕೃತಕ ಕಾವು ಕೊಡಲಾಗುತ್ತಿದೆ. ಪಿಲಿಕುಳದಲ್ಲಿ 19 ಕಾಳಿಂಗ ಸರ್ಪಗಳಿವೆ.
ಲಾಕ್‌ಡೌನ್ ಮುಕ್ತಾಯದ ನಂತರ ಚೆನ್ನೈನ ವಂಡಲೂರು ಮೃಗಾಲಯದಿಂದ ಬಿಳಿ ಹುಲಿಯನ್ನು ತರಿಸಲಾಗುವುದು. ಪ್ರಾಣಿ ವಿನಿಮಯದಲ್ಲಿ ಒರಿಸ್ಸಾದ ನಂದನ ಕಾನನ್, ಸೂರತ್, ಮತ್ತು ಹೈದರಬಾದ್ ಮೃಗಾಲಯದಿಂದ ಕೆಲವು ಪ್ರಾಣಿ, ಪಕ್ಷಿಗಳನ್ನು ತರುವ ಬಗ್ಗೆ ಕಾರ್ಯಕ್ರಮ ಕೈಗೊಳಲಾಗಿದೆ ಎಂದು ಪಿಲಿಕುಳ ಜೈವಿನ ಉದ್ಯಾನವನದ ನಿರ್ದೇಶಕ ಎಚ್. ಜಯಪ್ರಕಾಶ ಭಂಡಾರಿ ತಿಳಿಸಿದ್ದಾರೆ.















