Coastal Bulletin

ರಾಜ್ಯದಲ್ಲಿ ಕೊರೋನಾ ಸೋಂಕಿನ ಕಾರಣದಿಂದಾಗಿ ರಾಜ್ಯದಲ್ಲಿನ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಿ, ಪ್ರಥಮ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ಅಂಕಗಳ ಆಧಾರದ ಮೇಲೆ ಫಲಿತಾಂಶ ಪ್ರಕಟಿಸುವಂತ ನಿರ್ಧಾರವನ್ನು ಸರ್ಕಾರ ಕೈಗೊಂಡಿತ್ತು. ಇದರ ಬೆನ್ನಲ್ಲೇ, ವೃತ್ತಿಪರ ಕೋರ್ಸ್ ಗಳ ಸಿಇಟಿಗೆ ಮುಹೂರ್ತ ಫಿಕ್ಸ್ ಮಾಡಿದೆ. ಆಗಸ್ಟ್ 28, 29ರಂದು ನಡೆಸಲು ನಿರ್ಧರಿಸಿದೆ.

ಬೆಂಗಳೂರು: ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ದ್ವಿತೀಯ ಪಿಯುಸಿ ಅಂಕಗಳನ್ನು ಈ ವರ್ಷ ಪರಿಗಣಿಸದಿರಲು ನಿರ್ಧರಿಸಲಾಗಿದೆ. ಇದರ ಬೆನ್ನಲ್ಲೇ ಸಿಇಟಿಗೆ ಮುಹೂರ್ತ ಫಿಕ್ಸ್ ಮಾಡಿದ್ದು, ಆಗಸ್ಟ್ 28, 29ರಂದು ಪರೀಕ್ಷೆ ನಡೆಯಲಿದೆ ಎಂದು  ಉಪಮುಖ್ಯಮಂತ್ರಿ ಡಾ.ಸಿ. ಎನ್. ಅಶ್ವತ್ಥನಾರಾಯಣ  ಮಾಹಿತಿ ನೀಡಿದ್ದಾರೆ 

 ಈ ವರ್ಷಕ್ಕೆ ಅನ್ವಯವಾಗುವಂತೆ ಕೇವಲ ಸಿಇಟಿ

Rank ಆಧಾರದಲ್ಲಿ ವೃತ್ತಿಪರ ಕೋರ್ಸ್ ಗಳ ಪ್ರವೇಶ ನಡೆಯಲಿದೆ. ಪಿಯುಸಿ ಅಂಕ ಪರಿಗಣಿಸುವುದಿಲ್ಲ. ಈ  ಹಿನ್ನೆಲೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ಮಂಡಳಿಗಳಿಗೂ ಪತ್ರ ಬರೆಯಲಾಗುತ್ತದೆ ಎಂದರು.

ಸಿಇಟಿ ಪರೀಕ್ಷೆಯನ್ನು ಆಗಸ್ಟ್ 28, 29ರಂದು ನಡೆಸಲಾಗುತ್ತದೆ. ಮೊದಲ ದಿನ ಮ್ಯಾಥಮೇಟಿಕ್ಸ್ ಹಾಗೂ ಬಯೋಲಜಿ ಪರೀಕ್ಷ ನಡೆಯಲಿದೆ. ಎರಡನೇ ದಿನ ಫಿಜಿಕ್ಸ್ ಮತ್ತು ಕೆಮಿಸ್ಟ್ರಿ ಪರೀಕ್ಷೆ ನಡೆಯಲಿದೆ. ಮೂರನೇ ದಿನ ಗಡಿನಾಡಿನ ಕನ್ನಡಿಗರಿಗೆ ಪ್ರತ್ಯೇಕವಾಗಿ ಕನ್ನಡ ಪರೀಕ್ಷೆ ನಡೆಯಲಿದೆ. ಜೂನ್ 15ರಿಂದ ಸಿಇಟಿ ಪರೀಕ್ಷೆಗೆ ನೊಂದಣಿ ಆರಂಭವಾಗಲಿದೆ ಎಂದರು.

Leave a Comment