ಮಹಾರಾಷ್ಟ್ರ: ಪ್ರೇಮಿಗಳಿಬ್ಬರು ನಾಗುರದ ವಾತ್ಸಾ ಅರಣ್ಯದಲ್ಲಿ ಏಕಾಂತದಲ್ಲಿದ್ದಾಗ, ಹುಲಿ ದಾಳಿ ನಡೆಸಿ ಯುವಕ ಸಾವನ್ನಪ್ಪಿದ್ದು, ಯುವತಿ ಪಾರಾಗಿರುವ ಘಟನೆ ನಡೆದಿದೆ.
21 ವರ್ಷದ ಯುವಕ ತನ್ನ ಪ್ರೇಯಸಿಯ ಜೊತೆ ಕಾಡಿಗೆ ತೆರಳಿದ್ದಾಗ ಈ ಘಟನೆ ಸಂಭವಿಸಿದೆ. ಮೃತ ಜೋಪ್ ನಿವಾಸಿ ಅಜಿತ್ ಸೋಮೇಶ್ವರ್ ನಾಕಾಡೆ ಎಂದು ಗುರುತಿಸಲಾಗಿದೆ.
ಹುಲಿ ಯುವಕನ ಮುಖ ಮತ್ತು ಬೆನ್ನಿನ ಭಾಗವನ್ನು ಸಂಪೂರ್ಣ ತಿಂದು ಹಾಕಿದೆ.
ಈ ಘಟನೆ ನಡೆದಾಗ, ಯುವತಿ ಓಡಿಹೋಗಿ ಜೀವ ಉಳಿಸಿಕೊಂಡಿದ್ದಾಳೆ. ಆಕೆಗೆ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ.














