Coastal Bulletin

ಬಂಟ್ವಾಳ: ಶಾಲಾ ಕಾಲೇಜುಗಳ ಅಭಿವೃದ್ಧಿಗೆ ದೇವಾಲಯದಷ್ಟೇ ಮಹತ್ವ ನೀಡಿದಾಗ ಸಮಸ್ತ ಶೈಕ್ಷಣಿಕ ಕೇಂದ್ರಗಳ ನೈಜ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಹೇಳಿದರು.

ಇಲ್ಲಿನ ಬಿ.ಸಿ.ರೋಡು ಸಮೀಪದ ಕಾಮಾಜೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೂ 75 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಸೆಮಿನಾರ್ ಹಾಲ್ ಕಟ್ಟಡಕ್ಕೆ ಶುಕ್ರವಾರ ಶಿಲಾನ್ಯಾಸ ನೆರವೇರಿಸಿ, ಅವರು ಮಾತನಾಡಿದರು. 

ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ವಕೀಲ ಪ್ರಸಾದ್ ಕುಮಾರ್ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ರೈಟ್ಸ್ ಸಂಸ್ಥೆ ಅನೀಶ್, ಗುತ್ತಿಗೆದಾರ ಪ್ರಖ್ಯಾತ್ ಎಯ್ಯಾಡಿ,

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅಧ್ಯಕ್ಷ ಡಾ.ಅಜೆಕ್ಕಳ ಗಿರೀಶ ಭಟ್, ಪುರಸಭಾ ಸದಸ್ಯೆ ಶೋಭಾ ಹರೀಶ್ಚಂದ್ರ ಶುಭ, ಮಾಜಿ ಸದಸ್ಯ ಭಾಸ್ಕರ ಕುಲಾಲ್, ಕೇಶವ ದೈಪಲ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಅಪರ್ಣ ಆಳ್ವ, ಸಹ ಸಂಚಾಲಕ ಪ್ರೊ.ಹೈದರಾಲಿ, ಪ್ರೊ.ಶಶಿಕಲಾ, ಎಪಿಎಂಸಿ ಮಾಜಿ ಅಧ್ಯಕ್ಷ ರೊನಾಲ್ಡ್ ಡಿಸೋಜ ಮತ್ತಿತರರು ಇದ್ದರು.

ಕಾಲೇಜಿನ ಪ್ರಾಂಶುಪಾಲ ಡಾ.ಸತೀಶ್ ಗಟ್ಟಿ ಸ್ವಾಗತಿಸಿ, ವಂದಿಸಿದರು.

Leave a Comment