ಕೋಳಿಯ ಆಹಾರದ ಬೆಲೆ ಜಾತ್ತಿ ಆದ ಕಾರಣ ಕೋಳೀ ಮಾಂಸಕ್ಕೂ ಏರಿಕೆಯಾಗಿದೆ. ಕೋಳಿ ಫೀಡ್‌ಗೆ ಹೆಚ್ಚಾಗಿ ಸೋಯಾ ಮತ್ತು ಜೋಳವನ್ನು ಬಳಸಲಾಗುತ್ತದೆ. ಸೋಯಾ ಬೆಲೆ ಈಗ ದುಪ್ಪಟ್ಟು ಹೆಚ್ಚಾಗಿದೆ. ಹಿಂದೆಲ್ಲ 35 ರೂ.ಗೆ 1 ಕೆಜಿ ಸೋಯಾ ಸಿಗುತ್ತಿತ್ತು. ಈಗ ಪ್ರತಿ ಕೆಜಿಗೆ 70 ರೂ.ಗೆ ಏರಿಕೆಯಾಗಿದೆ. 15 ರೂ. ಲಭಿಸುತ್ತಿದ್ದ ಜೋಳದ ಬೆಲೆ 23 ರಿಂದ 24 ರೂ.ಗೆ ಏರಿಕೆಯಾಗಿದೆ.
ಬೇಸಿಗೆಯಲ್ಲಿ ಉತ್ಪಾದನೆ ಕಡಿಮೆ ಇದ್ದು, ಇದೇ ವೇಳೆ ಕೋಳಿ ಆಹಾರ ವಸ್ತುಗಳ ಬೆಲೆಯಲ್ಲೂ ಶೇ.25 ರಷ್ಟು ಏರಿಕೆಯಾಗಿದೆ. ಜೊತೆಗೆ ಇಂಧನ ಬೆಲೆ ಏರಿಕೆಯಿಂದಾಗಿ ಸಾಗಾಟ ದರವೂ ಹೆಚ್ಚಾಗಿದೆ.
ಸಾಮಾನ್ಯವಾಗಿ 25 ರಿಂದ 45 ರೂ.ಗೆ ಲಭಿಸುವ ಕೋಳಿ ಮರಿಯನ್ನು 44 ದಿನಗಳವರೆಗೆ ಬೆಳೆಸಿ 1 ಕೆಜಿ ತೂಕ ಬರಿಸಲು 90 ರೂ.ವರೆಗೂ ಖರ್ಚು ಮಾಡಬೇಕು. ಈ ಕೋಳಿಗಳನ್ನು ಮಾರಾಟ ಮಾಡುವಾಗ ಸೀಸನ್‌ಗೆ ಹೊಂದಿಕೊಂಡು 100ರಿಂದ
125 ರೂ.ವರೆಗೆ ಲಭಿಸುತ್ತದೆ. ವ್ಯಾಪಾರಿಗಳು ಇದನ್ನು ಮಾರುಕಟ್ಟೆ ದರಕ್ಕನುಸರಿಸಿ 150 ರೂ.ವರೆಗೂ ಮಾರಾಟ ಮಾಡುತ್ತಿದ್ದಾರೆ.
ಈ ಎಲ್ಲಾ ಕಾರಣಗಳಿಂದಾಗಿ ಕೋಳಿ ಮಾಂಸದ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿದೆ.ಬ್ರಾಯ್ಲರ್ ಕೋಳಿ ಕೆಜಿಗೆ 125 ರೂ. ಇದ್ದರೆ, ಸ್ಕಿನ್ ಔಟ್ ಕೋಳಿ ಮಾಂಸ ಕೆ.ಜಿಗೆ 180-200 ರೂ. ಇದೆ. ವಿತ್ ಸ್ಕಿನ್ ಕೋಳಿ ಮಾಂಸದ ಬೆಲೆ 250 ರೂ. ತಲುಪಿದೆ. ಇನ್ನು ನಾಟಿ ಕೋಳಿ ಕೆಜಿಗೆ 350 ರೂ. ಇದೆ.















