Coastal Bulletin

ಬಂಟ್ವಾಳ : ಶಿಕ್ಷಕ, ಶಿಕ್ಷಣ ಸಂಯೋಜಕ ಮತ್ತು ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಸುಮಾರು 34 ವಷ೯ಗಳ ಕಾಲ ದುಡಿದು ಇತ್ತೀಚೆಗೆ ನಿವೃತ್ತರಾದ ನಾಗನವಳಚ್ಚಿಲ್ ದೇವದಾಸ ಮಾಸ್ಟರ್ ರನ್ನು ಮಾನ೯ಬೈಲು ನಾಗನವಳಚ್ಚಿಲ್ ಶ್ರೀದುಗಾ೯ಪರಮೇಶ್ವರೀ ದೇವಸ್ಥಾನದ ವತಿಯಿಂದ ಅಭಿನಂದಿಸಲಾಯಿತು

ಪಾಣೆಮಂಗಳೂರಿನ ವೈದ್ಯ ಡಾ. ವಿಶ್ವನಾಥ ನಾಯಕ್ ಅತಿಥಿಯಾಗಿ ಮಾತನಾಡಿ ಎಲ್ಲಾ ವೃತ್ತಿಗೂ ಅದರದ್ದೇ ಆದ ಗೌರವವಿದ್ದು, ವೃತ್ತಿಯನ್ನು ನಾವು ಪ್ರೀತಿಸಿದಾಗ ಅದರಲ್ಲಿ ಸಂತೋಷವನ್ನು ಕಾಣಲು ಸಾಧ್ಯವಿದೆ ಎಂದು ಹೇಳಿದರು.

ಆರೋಗ್ಯ ಸಹಾಯಕಿ ನಾಗನವಳಚ್ಚಿಲ್ ಚಂದ್ರಪ್ರಭ ಅಪ್ಪು ನಾಯ್ಕ್ ಮಾತನಾಡುತ್ತಾ ದೇವದಾಸ್ ಮಾಸ್ಟರ್ ಅವರ ಸರಳತೆ, ಸೌಜನ್ಯ ಮತ್ತು ಸಮಾಜಮುಖಿ ಚಿಂತನೆ ನಮಗೆಲ್ಲರಿಗೂ ಸ್ಪೂರ್ತಿಯಾಗಲಿ

ಎಂದು ಹೇಳಿದರು. ಮುಖ್ಯ ಶಿಕ್ಷಕಿ ವಿಮಲಾ ಪುರುಷೋತ್ತಮ್ ಅಭಿನಂದನಾಪತ್ರ ವಾಚಿಸಿದರು. ಅಭಿನಂದನೆಯನ್ನು ಸ್ವೀಕರಿಸಿದ ದೇವದಾಸ ಮಾಸ್ಟರ್ ಮಾತನಾಡಿ ತನ್ನ ಸೇವಾವಧಿಯಲ್ಲಾದ ಅನುಭವಗಳನ್ನು ವಿವರಿಸಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ನಾಗನವಳಚ್ಚಿಲ್ ಗೋಪಾಲ ಬಂಗೇರ, ಜಯಂತಿ, ಶಿವಾನಿ ಉಪಸ್ಥಿತರಿದ್ದರು.

ಶ್ರೀ ದುಗಾ೯ಪರಮೇಶ್ವರೀ ದೇವಸ್ಥಾನದ ವ್ಯವಸ್ಥಾಪಕ ಚೇವಾರು ವಿನೋದ ಸ್ವಾಗತಿಸಿದರು. ಉಮೇಶ ಪೆಲತ್ತಕಟ್ಟೆ ವಂದಿಸಿದರು. 


Leave a Comment