ಉತ್ತರಕಾಶಿಯಲ್ಲಿ ಸಾವು ಗೆದ್ದು ಬಂದ 41 ಕಾರ್ಮಿಕರು- ಬರೋಬ್ಬರಿ 400 ಗಂಟೆ ಜೀವನ್ಮರಣ ಹೋರಾಟ!

Coastal Bulletin
ಉತ್ತರಕಾಶಿಯಲ್ಲಿ ಸಾವು ಗೆದ್ದು ಬಂದ 41 ಕಾರ್ಮಿಕರು- ಬರೋಬ್ಬರಿ 400 ಗಂಟೆ ಜೀವನ್ಮರಣ ಹೋರಾಟ!

ಉತ್ತರಕಾಶಿ: ಶತಕೋಟಿ ಜನರ ಪ್ರಾರ್ಥನೆ ಕೊನೆಗೂ ಫಲಿಸಿದೆ. ಜೀವದ ಹಂಗನ್ನು ತೊರೆದು 41 ಜನರ ಪ್ರಾಣ ರಕ್ಷಣೆಗಾಗಿ ಸತತ 400 ಗಂಟೆಗಳಿಂದ ಹಗಲಿರುಳೂ ಶ್ರಮಿಸಿದ ರಕ್ಷಣಾ ತಂಡದ ಛಲ, ಸಂಕಲ್ಪ ಸಿದ್ಧಿಸಿದೆ. ಉತ್ತರಾಖಂಡದ ಉತ್ತರಕಾಶಿ ಬಳಿ ನಿರ್ಮಾಣ ಹಂತದ ಸಿಲ್ಕ್ಯಾರಾ ಸುರಂಗದಲ್ಲಿ17 ದಿನಗಳಿಂದ ಸಿಲುಕಿದ್ದ ಎಲ್ಲಾ 41 ಕಾರ್ಮಿಕರನ್ನು ರಕ್ಷಣೆ ಮಾಡುವಲ್ಲಿ ರಕ್ಷಣಾ ತಂಡ ಯಶಸ್ವಿಯಾಗಿದೆ. ಇದರೊಂದಿಗೆ ಇಡೀ ದೇಶ ನಿಟ್ಟುಸಿರು ಬಿಟ್ಟಿದೆ.

ಹಲವು ದೈತ್ಯ ಯಂತ್ರಗಳ ಮೂಲಕ ಕಾರ್ಯಾಚರಣೆ ವಿಫಲವಾದ ಹಿನ್ನೆಲೆಯಲ್ಲಿ, ಕೊನೆಯ ಅಸ್ತ್ರವಾಗಿ ಸೋಮವಾರ 'ರ್ಯಾಟ್‌ ಹೋಲ್‌ ಮೈನಿಂಗ್‌' ತಜ್ಞರನ್ನು ರಂಗಕ್ಕಿಳಿಸಲಾಯಿತು. ಭಾರತದಲ್ಲಿ ಸುಕಕ್ಷತೆ ದೃಷ್ಟಿಯಿಂದ ರಾರ‍ಯಟ್‌ ಹೋಲ್‌ ಮೈನಿಂಗ್‌ ನಿಷೇದಿಸಲಾಗಿದ್ದರೂ, ವಿಧಿಯಿಲ್ಲದೆ ಈ ತಂತ್ರ ಬಳಸಿಕೊಳ್ಳಲಾಯಿತು. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಈ ತಂಡ ಕೇವಲ 24 ಗಂಟೆಗಳಿಗೂ ಕಡಿಮೆ ಅವಧಿಯಲ್ಲಿಇನ್ನುಳಿದ 10 ಮೀಟರ್‌

ದೂರಕ್ಕೆ ಕಿರು ಸುರಂಗ ಕೊರೆಯುವ ಮೂಲಕ ಮಂಗಳವಾರ ರಾತ್ರಿ ವೇಳೆಗೆ ಕಾರ್ಮಿಕರಿಗೆ ಬೆಳಕಿನ ದರ್ಶನ ಮಾಡಿಸಿತು.

ಎಲ್ಲರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಮುಂದಿನ 24 ಗಂಟೆಗಳ ಕಾಲ ಅವರ ಆರೋಗ್ಯದ ಮೇಲೆ ನಿಗಾ ಇಡಲಾಗುವುದು ಎಂದು ಪುಷ್ಕರ್‌ ಸಿಂಗ್‌ ಧಾಮಿ ಹೇಳಿದ್ದಾರೆ. ಅದರೊಂದಿಗೆ ಎಲ್ಲಾ ಕಾರ್ಮಿಕರಿಗೆ ತಲಾ 1 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಿದ್ದಾರೆ.

Leave a Comment