ಸಿಕ್ಕಿಂ : ಭಾರತೀಯ ಸೇನೆಯ ವಾಹನವು ಕಡಿದಾದ ಇಳಿಜಾರಿನಲ್ಲಿ ಉರುಳಿದ ಕಾರಣ 16 ಸೇನಾ ಯೋಧರು ಹುತಾತ್ಮರಾಗಿದ್ದು, ನಾಲ್ವರು ಗಾಯಗೊಂಡಿದ್ದಾರೆ.
ಈ ವಾಹನವು ಮೂರು ವಾಹನಗಳ ಬೆಂಗಾವಲು ಪಡೆಯ ಭಾಗವಾಗಿತ್ತು. ಅದು ಬೆಳಗ್ಗೆ ಚಾಟೆನ್ ನಿಂದ ಥಾಂಗು ಕಡೆಗೆ ಚಲಿಸುತ್ತಿತ್ತು. ಝೀಮಾ ಮಾರ್ಗದಲ್ಲಿ ವಾಹನ
ಅವಘಡವಾಗಿದೆ.
ಗಾಯವಾಗಿದ್ದ ನಾಲ್ವರು ಯೋಧರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೂವರು ಜೂನಿಯರ್ ಕಮಿಷನ್ಡ್ ಅಧಿಕಾರಿಗಳು ಮತ್ತು 13 ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಭಾರತೀಯ ಸೇನೆ ಹೇಳಿಕೆಯಲ್ಲಿ ತಿಳಿಸಿದೆ.














