Coastal Bulletin

ದುಬೈ : ಸೌದಿ ಅರೇಬಿಯಾದಲ್ಲಿ ಮಾದಕ ದ್ರವ್ಯ ಪಿಡುಗು ನಿಯಂತ್ರಿಸುವ ನಿಟ್ಟಿನಲ್ಲಿ ಕಟ್ಟು ನಿಟ್ಟಿನ ಕಾನೂನು ಜಾರಿಯಲ್ಲಿ ಇದೆ. ಅಪರಾಧ ಸಾಬೀತಾದರೆ ಮರಣ ದಂಡನೆ ನೀಡಲಾಗುತ್ತಿದೆ.

ಕಳೆದ 10 ದಿನಗಳಲ್ಲಿ 12 ಅಪರಾಧಿಗಳ ತಲೆ ಕಡಿಯಲಾಗಿದೆ. ಖಡ್ಗದಿಂದ‌ ಅಪರಾಧಿಗಳ ತಲೆ ಕಡಿಯಲಾಗಿದೆ. ಎಲ್ಲರೂ ಮಾದಕದ್ರವ್ಯ ಪ್ರಕರಣಗಳಲ್ಲಿ ಅಪರಾಧಿಗಳಾಗಿದ್ದರು.

ಮರಣ ದಂಡನೆ ಶಿಕ್ಷೆಗೆ ಗುರಿಯಾದವರಲ್ಲಿ ಮೂವರು ಪಾಕಿಸ್ತಾನಿಯರು ಸೇರಿದ್ದಾರೆ. ನಾಲ್ಕು ಮಂದಿ

ಸಿರಿಯನ್ ನಾಗರಿಕರಾಗಿದ್ದರೇ, ಇಬ್ಬರು ಜೋರ್ಡಾನ್ ನಾಗರಿಕರಾಗಿದ್ದಾರೆ.

ಮೂವರು ಸೌದಿ ಪ್ರಜೆಗಳಾಗಿದ್ದಾರೆ. ಎಲ್ಲರ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತಲೆ ಕಡಿಯಲಾಗಿದೆ. ಎರಡು ವರ್ಷಗಳ ಬಳಿಕ ಸೌದಿ ಅರೇಬಿಯಾದಲ್ಲಿ ಮರಣ ದಂಡನೆ ಶಿಕ್ಷೆ ಜಾರಿಗೊಳಿಸಲಾಗುತ್ತಿದೆ.

Leave a Comment