ತೆಹ್ರಾನ್ : ಮಹ್ಸಾ ಅಮಿನಿ ಲಾಕಪ್ ಡೆತ್ ನಂತರ ಹಿಜಬ್ ವಿರುದ್ಧ ಮಹಿಳಾ ಲೋಕ ಸಿಡಿದಿದ್ದಾರೆ. ಪ್ರತಿಭಟನೆ ತಡೆಯಲು ರೈಸಿ ಸರ್ಕಾರ ಬಲಪ್ರಯೋಗ ಮಾಡುತ್ತಿದೆ. ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದೆ. ಈವರೆಗೆ ಪೋಲಿಸರ ಗುಂಡಿಗೆ ಇರಾನ್ ದೇಶದ 8 ಮಂದಿ ಬಲಿಯಾಗಿದ್ದಾರೆ.
ಸಾವಿರಾರು ಮಹಿಳೆಯರು ಹಗಲಿರುಳೂ ಪ್ರತಿಭಟನೆ ಮಾಡುತ್ತಲೇ ಇದ್ದಾರೆ. ಹಿಜಬ್ ಕಟ್ಟುಪಾಡು ನಶಿಸಲಿ ಎಂದು ಘೋಷಣೆ ಕೂಗುತ್ತಿದ್ದಾರೆ. ಜೊತೆಗೆ ಕತ್ತರಿ
ಹಿಡಿದು ಕೂದಲನ್ನು ಕತ್ತರಿಸಿಕೊಳ್ಳುವ ಅಭಿಯಾನ ಕೂಡ ಶುರುವಾಗಿದೆ. ಇದೇ ವೇಳೆ ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ಹಿಜಬ್ ಕುರಿತು ವಿಚಾರಣೆ ನಡೆಯುತ್ತಿದೆ.














