breaking news

Coastal Bulletin

ವಾಷಿಂಗ್ಟನ್‌: ಅಮೆರಿಕದ ಪ್ರಮುಖ ರಫ್ತು ಮಂಡಳಿಗೆ ಭಾರತ ಮೂಲದ ಕಾರ್ಪೊರೇಟ್‌ ನಾಯಕರಾದ ಪುನೀತ್‌ ರೆಂಜೆನ್‌ ಮತ್ತು ರಾಜೇಶ್‌ ಸುಬ್ರ ಮಣಿಯಂ ಅವರನ್ನು ನೇಮಿಸಲು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಉದ್ದೇಶಿಸಿದ್ದಾರೆ.

ಈ ರಫ್ತು ಮಂಡಳಿಯು ಅಂತಾರಾಷ್ಟ್ರೀಯ ವ್ಯಾಪಾರದ ಪ್ರಮುಖ ರಾಷ್ಟ್ರೀಯ ಸಲಹಾ ಸಮಿತಿಯಾಗಿದೆ. ಪುನೀತ್‌ ರೆಂಜೆನ್‌(62) ಅವರು ಡೆಲಾಯ್‌ ಕನ್ಸಲ್ಟಿಂಗ್‌ನ ಮಾಜಿ ಸಿಇಒ

ಆಗಿದ್ದಾರೆ. ರಾಜೇಶ್‌ ಸುಬ್ರಮಣಿಯಂ(55) ಅವರು ಫೆಡ್‌ಎಕ್ಸ್‌ ಸಿಇಒ ಮತ್ತು ಅಧ್ಯಕ್ಷರಾಗಿದ್ದಾರೆ. ಅವರು 2023ರ ಪ್ರತಿಷ್ಠಿತ ಪ್ರವಾಸಿ ಭಾರತೀಯ ಸಮ್ಮಾನ್‌ ಪ್ರಶಸ್ತಿ ಪಡೆದಿದ್ದಾರೆ.

Leave a Comment