Coastal Bulletin

ಬಂಟ್ವಾಳ :ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಜ್ಯೋತಿಗುಡ್ಡೆಯಲ್ಲಿ ನಡೆಯುವ ದೈವಾರಾಧನೆ, ದೇವತಾರಾಧನೆಯು ವಿಶಿಷ್ಟ ರೂಪದ್ದಾಗಿದೆ. ಭಕ್ತಿಯು ಸಾಂಸ್ಕೃತಿಕವಾಗಿ ಬೆಳೆದರೆ ಭಜನೆ ಮೂಲಕ ಮನೆಮನೆಗೆ ಕಾಲಿಡುತ್ತದೆ. ಅರ್ಥಗರ್ಭಿತ ಸಾರಾಂಶವನ್ನು ಸಾರುವ ಭಜನೆ ಮನೆಮನೆ ಸೇರುವ ಮೂಲಕ ಸಮಾಜ ಬದಲಾವಣೆಗೆ ಪ್ರೇರೇಪಿಸುತ್ತದೆ. ಆ ಮೂಲಕ ಆಂತರ್ಯದ ಕಣ್ಣಿಗೆ ಕಾಣುವ ಪರಿವರ್ತನೆ ನಡೆದು ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ ಎಂದು ಕೃಷ್ಣಾರಾಧ್ಯಮ್ ಜ್ಯೋತಿಷಿ ಅನಿಲ್ ಪಂಡಿತ್ ಅಭಿಪ್ರಾಯ ಪಟ್ಟರು.

ಆವರು ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರೀ ದೇವಳದ ವಾರ್ಷಿಕ ಉತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಅತಿಥಿಯಾಗಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ನೃತ್ಯಾಂಜಲಿ ಭರತನಾಟ್ಯ ಕೇಂದ್ರದ ವಿದುಷಿ ಶ್ರೀಮತಿ ಮಲ್ಲಿಕಾ ವೇಣುಗೋಪಾಲ್ ಇವರನ್ನು ಸನ್ಮಾನಿಸಲಾಯಿತು. ಬಳಿಕ ಕಾರ್ತಿಕ್ ಪೂಜಾರಿ ಮಾಡಂಗೆ ಮತ್ತು ಪ್ರಜ್ವಲ್ ಕುಮಾರ್ ಜ್ಯೋತಿಗುಡ್ಡೆ ಇವರು ನಿರ್ಮಿಸಿದ ಕ್ಷೇತ್ರದ ಧ್ವನಿ ಮಾಲಿಕೆಯ ಬಿಡುಗಡೆ ನಡೆಯಿತು. ವೇದಿಕೆಯಲ್ಲಿ ನಮಿತ ಉಮೇಶ್ ಕೊಡಂಗೆ, ವಿಶ್ವನಾಥ ಬಂಗೇರ ಮಯ್ಯೆರಬೈಲು, ಪುಷ್ಪ ಬಂಜನ್ ದರಿಬಾಗಿಲು, ಭಾಗೀರಥಿ ನಾರಾಯಣ ನಾಯ್ಕ ಉಪಸ್ಥಿತರಿದ್ದರು.

ಕು.ಸ್ವರ ಎಮ್‌ವಿ, ವಿನ್ಯಾಶ್ರೀ,

ಸಿಂಚನ ಅಮ್ಟಾಡಿ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಧಾರ್ಮಿಕ ಸಭೆಗೆ ಸೇವಾ ಟ್ರಸ್ಟಿ ತಾರಾನಾಥ ಟಿ ಕೊಟ್ಟಾರಿ ಪ್ರಸ್ತಾವಿಕವಾಗಿ ಮಾತನಾಡಿದರು. ಸೇವಾ ಸಮಿತಿಯ ಸಂಚಾಲಕ ನಾರಾಯಣ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಕೇಶವ ನಾಯ್ಕ ಸ್ವಾಗತಿಸಿ, ವೇಣುಗೋಪಾಲ್ ದೇಮುಂಡೆ ವಂದಿಸಿದರು. ಕಾರ್ಯದರ್ಶಿ ಉದಯ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

ನೃತ್ಯಾಂಜಲಿಯ ವಿದ್ಯಾರ್ಥಿಗಳಿಂದ ಭರತನಾಟ್ಯ, ಜರ್ನಿ ಥೇರ‍್ಸ್ ಗ್ರೂಪ್ (ರಿ) ಮಂಗಳೂರು ಇವರಿಂದ ವಿದ್ದು ಉಚ್ಚಿಲ್ ನಿರ್ದೇಶನದ ಪ್ರೊ ಅಮೃತ ಸೋಮೇಶ್ವರ್ ರಚನೆಯ ತುಳು ಜಾನಪದ ನಾಟಕ ಗೋಂದೋಳು ಜನ ಮೆಚ್ಚುಗೆ ಪಡೆಯಿತು.

Leave a Comment