Coastal Bulletin

ನಾನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕಾರ್ಯದರ್ಶಿಗೆ ಹಣ ನೀಡದೆ ಇರುವುದಕ್ಕೆ ನನಗೆ ವಿಧಾನಸಭೆ ಚುನಾವಣೆ ಟಿಕೆಟ್​ ಸಿಗಲಿಲ್ಲ. ಕಾಂಗ್ರೆಸ್ ಮಹಿಳಾ ವಿರೋಧಿ ಪಕ್ಷ ಎಂದು ಆರೋಪ ಮಾಡಿದ್ದ ಉತ್ತರಪ್ರದೇಶ ಕಾಂಗ್ರೆಸ್​ನ ಉಪಾಧ್ಯಕ್ಷೆಯೂ ಆಗಿದ್ದ ಪ್ರಿಯಾಂಕ ಮೌರ್ಯ ಇದೀಗ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. 

ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್​ ಕಿರಿಯ ಪುತ್ರ ಪ್ರತೀಕ್​ ಯಾದವ್ ಪತ್ನಿ ಅಪರ್ಣಾ ಯಾದವ್​ (ಮುಲಾಯಂ ಸಿಂಗ್ ಯಾದವ್ ಸೊಸೆ) ಬಿಜೆಪಿಗೆ ಸೇರ್ಪಡೆಯಾಗಿದ್ದರು. ಅದರ ಬೆನ್ನಲ್ಲೇ ಮುಲಾಯಂ ಸಿಂಗ್ ಯಾದವ್​ ಮೈದುನ ಪ್ರಮೋದ್ ಗುಪ್ತಾ ಕೂಡ ಅದೇ ಹಾದಿ ಹಿಡಿದಿದ್ದಾರೆ. ಅಷ್ಟೇ ಅಲ್ಲ, ಮುಲಾಯಂ ಸಿಂಗ್

ಯಾದವ್ ಅವರನ್ನು ಅಖಿಲೇಶ್ ಯಾದವ್​ ಎಲ್ಲ ವಿಧದಲ್ಲೂ ಕಟ್ಟಿಹಾಕಿದದಾರೆ. ಆ ಪಕ್ಷದಲ್ಲೀಗ ಕ್ರಿಮಿನಲ್​ಗಳು, ಜೂಜೂಕೋರರು ತುಂಬಿಹೋಗಿದ್ದಾರೆ ಎಂದು ಹೇಳಿದ್ದಾರೆ. ಹಾಗೇ, ಕಾಂಗ್ರೆಸ್​ನಿಂದ ಬಂದ ಪ್ರಿಯಾಂಕ ಮೌರ್ಯ ಕೂಡ  ಪ್ರತಿಕ್ರಿಯೆ ನೀಡಿ, ಸಮಾಜಸೇವೆ ಮಾಡುವವರಿಗೆ ಬಿಜೆಪಿ ಅತ್ಯುತ್ತಮ ವೇದಿಕೆ ಕಲ್ಪಿಸಿಕೊಡುತ್ತದೆ. ಇದೇ ಕಾರಣಕ್ಕೆ ಇಲ್ಲಿಗೆ ಬಂದಿದ್ದೇನೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

Leave a Comment