Coastal Bulletin

ಮೂಡಬಿದಿರೆ: ಇಂದು ಮುಂಜಾನೆ ಹಿರಿಯ ಯಕ್ಷಗಾನ ಕಲಾವಿದ ವಾಮನ ಕುಮಾರ್ ವೇಣೂರು(47) ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಗಂಟಾಲ್ಕಟ್ಟೆ ಯ ಸಮೀಪ ಓಮ್ನಿ  ಕಾರು ಬೈಕ್ ಡಿಕ್ಕಿ ಆಗಿ ಬೈಕ್‌ನಲ್ಲಿ ಹೋಗುತ್ತಿದ್ದ ವಾಮನ್ ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

26 ವರ್ಷಗಳ ಕಾಲ ತಿರುಗಾಟ ನಡೆಸಿದ್ದ ಅನುಭವಿ ಯಕ್ಷಗಾನ ಕಲಾವಿದರಾದ ಇವರು ಹಾಸ್ಯ,

ಸ್ತ್ರೀ, ಪುರುಷ ಹೀಗೆ ಹಲವು ಪಾತ್ರಗಳನ್ನು ಮಾಡಿ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ.

ಧರ್ಮಸ್ಥಳ ,ಕದ್ರಿ ಮೇಳದಲ್ಲಿ ಸೇವೆ ಸಲ್ಲಿಸಿದ್ದ ಇವರು ಪ್ರಸ್ತುತ ಹಿರಿಯಡ್ಕ ಮೇಳದ ಕಲಾವಿದರಾಗಿದ್ದರು. ಇದೀಗ  ಇವರ ಸಾವು ಅಭಿಮಾನಿಗಳಿಗೆ ಕಂಬನಿ ತಂದಿದೆ.

Leave a Comment