ಬೆಂಗಳೂರು: ಸ್ಯಾಂಡಲ್ವುಡ್ ನಿರ್ದೇಶಕ ಪ್ರದೀಪ್ ರಾಜ್(46) ಕೊರೊನಾ ಸೋಂಕಿನಿಂದ ನಿಧನರಾಗಿದ್ದಾರೆ.
'ಕಿರಾತಕ', 'ಅಂಜದಗಂಡು', 'ಬೆಂಗಳೂರು 23' ಸೇರಿದಂತೆ ಹಲವು ಸಿನಿಮಾಗಳನ್ನು ಪ್ರದೀಪ್ ರಾಜ್ ನಿರ್ದೇಶಿಸಿ,ಜನಪ್ರಿಯತೆ ಹೊಂದಿದ್ದರು.
ಇಂದು ಬೆಳಗಿನಜಾವ 3 ಗಂಟೆ ಸುಮಾರಿಗೆ ಪ್ರದೀಪ್ ರಾಜ್ ಕೊನೆಯುಸಿರೆಳೆದಿದ್ದು, ಪತ್ನಿ, ಇಬ್ಬರು ಮಕ್ಕಳನ್ನು ಅವರು ಅಗಲಿದ್ದಾರೆ.















