Coastal Bulletin

ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ 71ನೇ ಹುಟ್ಟುಹಬ್ಬದ ಅಂಗವಾಗಿ ದೇಶಾದ್ಯಂತ ಇಂದು ವಿಶೇಷ ಕೋವಿಡ್​​ ವ್ಯಾಕ್ಸಿನೇಷನ್​ ಅಭಿಯಾನ ನಡೆದಿದ್ದು ಇಂದು ಸಂಜೆ ವೇಳೆಗೆ ದಾಖಲೆಯ 2 ಕೋಟಿ ಡೋಸ್​ ಲಸಿಕೆ ಹಾಕಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಆದರೆ ಮತ್ತೊಂದೆಡೆ ಹುಟ್ಟು ಹಬ್ಬದ ಶುಭಾಶಯಗಳಿಗಿಂತ  ಟ್ವಿಟರ್‌ನಲ್ಲಿ ಉದ್ಯೋಗ ಬೇಡಿದವರ ಸಂಖ್ಯೆಯೇ ಹೆಚ್ಚಾಗಿದೆ.  ಟ್ವಿಟರ್ ಹ್ಯಾಷ್ ಟ್ಯಾಗ್ ಮೂಲಕ 'ರಾಷ್ಟ್ರೀಯ ಬೆರೋಜ್‌ಗರ್ ದಿನ' 'ರಾಷ್ಟ್ರೀಯ ನಿರುದ್ಯೋಗ ದಿನ' 'ಮೋದಿ ರೋಜ್ಗಾರ್ ದೊ'.  ಟ್ವಿಟರ್

ಟ್ರೆಂಡಿಂಗ್ ನಡೆದಿತ್ತು.  ಅಂಕಿ ಅಂಶಗಳ ಪ್ರಕಾರ  ಶುಕ್ರವಾರ ಮಧ್ಯಾಹ್ನದ ವೇಳೆಗೆ ಸುಮಾರು 3.92 ಲಕ್ಷ ಜನರು ಜನುಮ ದಿನದ ಶುಭಾಶಯ ಕೋರಿದರೆ  ಸುಮಾರು  23.51 ಲಕ್ಷಕ್ಕೂ ಹೆಚ್ಚು  ನಿರುದ್ಯೋಗವನ್ನು ನಿವಾರಿಸುವಂತೆ ಟ್ವೀಟ್‌ ಮಾಡಿದ್ದ‍ಾರೆ.

Leave a Comment