ಇಸ್ರೇಲ್ : ಯುದ್ಧಪೀಡಿತ ಇಸ್ರೇಲ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ಕೇಂದ್ರ ಸರ್ಕಾರ ಆಪರೇಷನ್ ಅಜಯ್ ಆರಂಭಿಸಿದೆ. ಗುರುವಾರ ರಾತ್ರಿ ಬೆನ್ ಗುರಿಯಾನ್ ವಿಮಾನ ನಿಲ್ದಾಣದಿಂದ ಮೊದಲ ಚಾರ್ಟರ್ ಫ್ಲೈಟ್ ದೆಹಲಿ ತಲುಪಿದೆ, 212 ಭಾರತೀಯರು ಸುರಕ್ಷಿತವಾಗಿ ವಾಪಸ್ ಆಗಿದ್ದಾರೆ.
ಮೊದಲು ಬಂದವರಿಗೆ ಮೊದಲ ಅವಕಾಶ ಆಧಾರದಲ್ಲಿ ಇಸ್ರೇಲ್‌ನಿಂದ ಭಾರತಕ್ಕೆ ಕರೆತರಲಾಗುತ್ತಿದೆ. ಅಕ್ಟೋಬರ್ 7ರಿಂದ ಇಸ್ರೇಲ್ - ಹಮಾಸ್ ಉಗ್ರರ ನಡುವೆ ಯುದ್ಧ ನಡೆಯುತ್ತಿದ್ದು, ಅಂದಿನಿಂದಲೇ ಏರ್ ಇಂಡಿಯಾ ಇಸ್ರೇಲ್‌ಗೆ ವಿಮಾನ ಸೇವೆಯನ್ನು ರದ್ದು ಮಾಡಿತ್ತು, ಇದರಿಂದ
ಸಾವಿರಾರು ಭಾರತೀಯರು ವಾಪಸ್ ಬರಲು ಪರದಾಡುವಂತಾಗಿತ್ತು, ಅವರಿಗಾಗಿ ಕೇಂದ್ರ ಈಗ ವಿಮಾನ ವ್ಯವಸ್ಥೆ ಮಾಡಿದೆ. ಇಸ್ರೇಲ್‌ನಲ್ಲಿ ಸಂಘರ್ಷ ತೀವ್ರವಾಗಿದ್ದು, ವಾಣಿಜ್ಯ ವಿಮಾನ ಸೇವೆ ಇನ್ನೂ ಆರಂಭಗೊಂಡಿಲ್ಲ.ಅಂದಾಜು ಹದಿನೈದರಿಂದ ಇಪ್ಪತ್ತು ಸಾವಿರದಷ್ಟು ಭಾರತೀಯರು ಇಸ್ರೇಲ್ ನಲ್ಲಿ ನೆಲೆಸಿದ್ದಾರೆ.















