ಯೆಮೆನ್​ನಲ್ಲಿ ಗಲ್ಲು ಶಿಕ್ಷೆಗೆ ಒಳಗಾಗಿರುವ ನಿಮಿಷಾ ಉಳಿಸಿಕೊಳ್ಳಲು ಅಂತಿಮ ಪ್ರಯತ್ನ; ಸಂತ್ರಸ್ತ ಕುಟುಂಬ ಭೇಟಿ ಮಾಡಲಿರುವ ಆ್ಯಕ್ಷನ್​ ಕೌನ್ಸಿಲ್

Coastal Bulletin
ಯೆಮೆನ್​ನಲ್ಲಿ ಗಲ್ಲು ಶಿಕ್ಷೆಗೆ ಒಳಗಾಗಿರುವ ನಿಮಿಷಾ ಉಳಿಸಿಕೊಳ್ಳಲು ಅಂತಿಮ ಪ್ರಯತ್ನ; ಸಂತ್ರಸ್ತ ಕುಟುಂಬ ಭೇಟಿ ಮಾಡಲಿರುವ ಆ್ಯಕ್ಷನ್​ ಕೌನ್ಸಿಲ್

ಎರ್ನಾಕುಲಂ, ಕೇರಳ: ಯೆಮೆನ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಗಲ್ಲಿಗೇರಲು ಇನ್ನು ಐದು ದಿನಗಳು ಮಾತ್ರವೇ ಬಾಕಿ ಉಳಿದಿದ್ದು, ಅವರನ್ನು ರಕ್ಷಿಸುವ ಅಂತಿಮ ಪ್ರಯತ್ನಗಳು ನಿರಂತರವಾಗಿ ಸಾಗಿವೆ. ಈ ನಡುವೆ ಸೇವ್ ನಿಮಿಷಾ ಪ್ರಿಯಾ ಇಂಟರ್​​ನ್ಯಾಷನಲ್​ ಆ್ಯಕ್ಷನ್ ಕೌನ್ಸಿಲ್ ಕೊನೆ ಹಂತದ ಪ್ರಯತ್ನವೊಂದನ್ನು ಮಾಡಿದೆ.

ಸೇವ್ ನಿಮಿಷಾ ಪ್ರಿಯಾ ಇಂಟರ್​​ನ್ಯಾಷನಲ್​ ಆಕ್ಷನ್ ಕೌನ್ಸಿಲ್​ನ ಸದಸ್ಯರಾದ ಸ್ಯಾಮುಯೆಲ್​ ಜೆರೊಮೆ ಯೆಮೆನ್​ನಲ್ಲಿದ್ದು, ಇಂದು ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡುವ ನಿರೀಕ್ಷೆ ಇದೆ. ಹಲವು ತಿಂಗಳ ಪ್ರಯತ್ನ ಫಲವಾಗಿ ಮಂಡಳಿಯು ಇದೀಗ ಸಂತ್ರಸ್ತರ ಮುಖಾಮುಖಿ ಚರ್ಚೆ ನಡೆಸುವ ಆಶಯ ಹೊಂದಿದ್ದು, ಇದು ದೊಡ್ಡ ತಿರುವಿಗೆ ಕಾರಣವಾಗಬಲ್ಲದು. ಕೌನ್ಸಿಲ್ ಸಂಚಾಲಕ ಬಾಬು ಜಾನ್ ಅವರ ಪ್ರಕಾರ, ಸ್ಥಳೀಯ ಜೈಲು ಅಧಿಕಾರಿಗಳ ಸಹಾಯದಿಂದ ಸಭೆಯನ್ನು ಏರ್ಪಡಿಸಲಾಗಿದೆ.

ಮರಣದಂಡನೆ ಆದೇಶದ ನಡುವೆಯೂ ಇದೊಂದು ಪ್ರಯತ್ನ ನಿಮಿಷಾಗೆ ದೊಡ್ಡ ಭರವಸೆಯಾಗಿದೆ. ತಮ್ಮ ಮರಣದಂಡನೆ ಆದೇಶ ಹಿಂಪಡೆಗೆ ಪ್ರತಿಯಾಗಿ ನೀಡುವ ಬ್ಲಡ್​ ಮನಿಯನ್ನು ಸಂತ್ರಸ್ತರ ಕುಟುಂಬ ಒಪ್ಪಬಹುದು ಎಂಬ ನಂಬಿಕೆ ಇನ್ನೂ ಇದೆ ಎಂದು ನಿಮಿಷಾ ತಿಳಿಸಿದ್ದಾರೆ. ಇನ್ನು ಸಂತ್ರಸ್ತ ಕುಟುಂಬಕ್ಕೆ ಬ್ಲಡ್​ಮನಿ (ಸಾವಿಗೆ ಹಣದ ರೂಪದಲ್ಲಿ ಕುಟುಂಬಕ್ಕೆ ನೀಡುವ ಪರಿಹಾರ)ಯಾಗಿ 7.5 ಕೋಟಿ (ಅಂದಾಜು 900,000 ಡಾಲರ್​) ನೀಡಲು ಕುಟುಂಬ ಮುಂದಾಗಿದ್ದು, ಅವರ ನಿರ್ಧಾರಕ್ಕೆ ಕಾದು ನೋಡಲಾಗುತ್ತಿದೆ.

ಏನಿದು ಪ್ರಕರಣ?: ಯೆಮೆನ್​​ ದೇಶದಲ್ಲಿ ನರ್ಸ್​ ಆಗಿ ಕೆಲಸ ಮಾಡುತ್ತಿದ್ದ ಕೇರಳದ ಮೂಲದ

ನಿಮಿಷಾ ಪ್ರಿಯಾ ಅವರು, ಅಲ್ಲಿನ ವ್ಯಕ್ತಿಯೊಬ್ಬರು ತಮಗೆ ಕಿರುಕುಳ ನೀಡುತ್ತಿದ್ದಾರೆ, ತಮ್ಮ ಪಾಸ್​​ಪೋರ್ಟ್​ ಅನ್ನೂ ಕಿತ್ತುಕೊಂಡಿದ್ದಾರೆ ಎಂದು ಆರೋಪಿಸಿದ್ದರು. ವಶದಲ್ಲಿದ್ದ ಪಾಸ್​​ಪೋರ್ಟ್​ ಮರಳಿ ಪಡೆಯಲು ಆ ವ್ಯಕ್ತಿಗೆ ಮಂಪರು ಬರುವ ಇಂಜೆಕ್ಷನ್​ ನೀಡಿದ್ದರು. ಡೋಸ್​ ಹೆಚ್ಚಾಗಿ ಆ ವ್ಯಕ್ತಿ ಸಾವಿಗೀಡಾಗಿದ್ದ. 2017 ರಲ್ಲಿ ಕೊಲೆ ಆರೋಪದ ಮೇಲೆ ನಿಮಿಷಾ ಪ್ರಿಯಾ ಅವರಿಗೆ ಮರಣದಂಡನೆ ವಿಧಿಸಲಾಗಿದೆ.

ಸುಪ್ರೀಂ ಮಧ್ಯಸ್ಥಿಕೆಗೆ ಆಕ್ಷನ್ ಮಂಡಳಿ ಮನವಿ: ಈ ನಡುವೆ ಕಾರ್ಯಕಾರಿ ಮಂಡಳಿ ಸುಪ್ರೀಂ ಕೋರ್ಟ್ನ ಕದ ತಟ್ಟಿದ್ದು, ತಕ್ಷಣಕ್ಕೆ ಈ ವಿಚಾರದಲ್ಲಿ ಮಧ್ಯಸ್ಥಿಕೆಗೆ ಮುಂದಾಗುವಂತೆ ಒತ್ತಾಯಿಸಿತು. ಕೇಂದ್ರವೂ ಈ ಕುರಿತು ತೆಗೆದುಕೊಂಡ ನಿರ್ಧಾರಗಳ ಕುರಿತು ವಿವರವಾದ ವರದಿ ನೀಡುವಂತೆ ಕೋರ್ಟ್ ತಿಳಿಸಿದೆ. ಆಕೆಯ ಗಲ್ಲು ಶಿಕ್ಷೆಗೆ ಎರಡು ದಿನ ಮುನ್ನ ಜು. 14ರಂದು ಕೋರ್ಟ್ ವಿಚಾರಣೆ ಆಲಿಸಲಿದೆ.

ಇದರಲ್ಲಿ ಈ ಮೊದಲು ಇರಾನ್ ಜೊತೆಗೆ ಮಾತುಕತೆ ನಡೆಸುವ ಪ್ರಯತ್ನ ನಡೆದಿತ್ತು. ಆದರೆ, ಯೆಮನ್‌ನಲ್ಲಿ ಹೌತಿ ನಾಯಕತ್ವ ಪ್ರಭಾವ ಹಾಗೂ ಅಲ್ಲಿನ ಪ್ರಾದೇಶಿಕ ಉದ್ವಿಗ್ನತೆಗಳು ಮತ್ತು ವ್ಯಾಪಕವಾದ ಪಶ್ಚಿಮ ಏಷ್ಯಾದ ಸಂಘರ್ಷವು ಆ ಪ್ರಯತ್ನಗಳನ್ನು ಸ್ಥಗಿತಗೊಳಿಸಿತು.

Leave a Comment