ಬೆಂಜನಪದವು: ಹೃದಯಘಾತದಿಂದ ಮಹಿಳೆ ಸಾವು.

Coastal Bulletin
ಬೆಂಜನಪದವು: ಹೃದಯಘಾತದಿಂದ ಮಹಿಳೆ ಸಾವು.

ಬಂಟ್ವಾಳ :ತಾಲೂಕಿನ ಅಂಮುಂಜೆ ಗ್ರಾಮದ ಬೆಂಜನಪದವು ಶಾಂತಿನಗರ ನಿವಾಸಿ ಜಲಜಾಕ್ಷಿ (61) ಎಂಬವರು ಹೃದಯಘಾತದಿಂದ ಸಾವನ್ನಪ್ಪಿದ ಘಟನೆ ಜು 10ರಂದು ಗುರುವಾರ ನಡೆದಿದೆ.

ಮೂರು ದಿನದಿಂದ ಜ್ವರದಿಂದ ಬಳಲುತಿದ್ದ ಅವರು ಜು 10ರಂದು ರಾತ್ರಿ 10ಗಂಟೆಯ ಸುಮಾರಿಗೆ ಎಕಾಏಕಿ ಎದೆನೋವು ಬಂದ ಹಿನ್ನಲೆಯಲ್ಲಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಕೊಂಡೊಯ್ಯಲಾದರೂ ಆಸ್ಪತ್ರಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ

ಹೃದಯಘಾತದಿಂದ ನಿಧನ ಹೊಂದಿದರು ಎಂದು ಕುಟುಂಬ ಮೂಲಗಳು ತಿಳಿಸಿದೆ. ಬೆಂಜನಪದವು ಶಿವಾಜಿನಗರದ ಸರಕಾರಿ ಶಾಲೆಯಲ್ಲಿ ಬಿಸಿಯೂಟದ ಅಡುಗೆ ಕೆಲಸ ನಿರ್ವಹಿಸಿ ಇವರು ಇತ್ತೀಚಿಗಷ್ಟೇ ನಿವೃತ್ತಿ ಹೊಂದಿದ್ದರು, ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.

Leave a Comment