ಬಿಹಾರ: ಸಿಡಿಲಿನ ಹೊಡೆತಕ್ಕೆ ಬಿಹಾರದಲ್ಲಿ ಕಳೆದ 48 ಗಂಟೆಗಳಲ್ಲಿ ಅನೇಕ ಮಂದಿ ಸಾವನ್ನಪ್ಪಿದ್ದಾರೆ. ಮಳೆ, ಮಿಂಚಿನಿಂದ ರಾಜ್ಯ ವಿವಿಧ ಜಿಲ್ಲೆಯಲ್ಲಿ 63 ಮಂದಿ ಸಾವನ್ನಪ್ಪಿದ್ದು, ಸರ್ಕಾರದಿಂದ ಅಧಿಕೃತವಾಗಿ 25 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಲಾಗಿದೆ. ಅದರಲ್ಲೂ ನಳಂದ ಜಿಲ್ಲೆಯಲ್ಲಿಯೇ 22 ಮಂದಿ ಸಾವನ್ನಪ್ಪಿದ್ದಾರೆ ಎಂದು ದತ್ತಾಂಶ ತಿಳಿಸಿದೆ.
ನಳಂದದಲ್ಲಿ ಅಧಿಕ ಸಾವು: ದತ್ತಾಂಶದ ಪ್ರಕಾರ, ಮಿಂಚು, ಮಳೆ ಸಂಬಂಧಿತ ಬಹುತೇಕ ಸಾವುಗಳು ಬಿಹಾರದಲ್ಲಿ ವರದಿಯಾಗಿದೆ. 22 ಮಂದಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ.
ಬಿಹಾರಶರೀಫ್ನ ನಗ್ಮಾದಲ್ಲಿ 6, ದರ್ಭಾಂಗದಲ್ಲಿ 6, ಬೇಗುಸರಾಯ್ನಲ್ಲಿ 5, ಮಧುಬನಿಯಲ್ಲಿ 4, ಜಮುಯಿ 3 ಮಂದಿ, ಸಮಸ್ತಿಪುರದಲ್ಲಿ 2, ಸಹರ್ಸಾದಲ್ಲಿ 4, ಔರಂಗಾಬಾದ್‌ನಲ್ಲಿ 2, ಪಾಟ್ನಾದಲ್ಲಿ 3, ಅರಾರಿಯಾದಲ್ಲಿ 1, ಗಯಾದಲ್ಲಿ 3, ಭೋಜ್‌ಪುರದಲ್ಲಿ 5, ಜೆಹಾನಾಬಾದ್, ಅರ್ವಾಲ್, ಮುಜಫರ್ ಪುರ್ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.
ಪರಿಹಾರ ಘೋಷಿಸಿದ ಸಿಎಂ: ಸಿಡಿಲಿನಿಂದ ಹೆಚ್ಚಿನ ಸಾವು ಸಂಭವಿಸಿರುವ ಕುರಿತು ಸಂತಾಪ ವ್ಯಕ್ತಪಡಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಸಂತ್ರಸ್ತ ಕುಟುಂಬಗಳಿಗೆ ತೀವ್ರ ಸಂತಾಪ ಸೂಚಿಸಿದ್ದು, ತಕ್ಷಣ ತಲಾ 4 ಲಕ್ಷ ರೂ.ಗಳ ಪರಿಹಾರವನ್ನು ನೀಡುವಂತೆ ಸೂಚಿಸಿದ್ದಾರೆ.
ತಜ್ಞರು ಹೇಳುವುದೇನು?: ಬಿಹಾರದಲ್ಲಿ ಹವಾಮಾನ ಬದಲಾವಣೆಯ ಪರಿಣಾಮ ಕುರಿತು ಮಾತನಾಡಿರುವ ತಜ್ಞರು, ಬಿಹಾರದಲ್ಲಿ ಬಿಸಿಲಿನ ತಾಪದ ನಡುವೆ ಹವಾಮಾನ ವೈಪರೀತ್ಯ ಕಂಡಿದೆ. ರಾತ್ರಿಯಲ್ಲಿ ಗಾಳಿ ವೇಗವಾಗಿ ಬೀಸುತ್ತಿದ್ದಾಗ, ಕೆಲವು ಪ್ರದೇಶದಲ್ಲಿ ಒತ್ತಡ ಕಂಡು ಬಂದಿದೆ. ಪರಿಣಾಮ, ಗುಡುಗು ಮಿಂಚಿನ ಮಳೆಯಾಗಿದೆ. ಪ್ರತಿ ವರ್ಷ ಮಿಂಚಿನಿಂದ ಹಲವು ಸಾವು ಸಂಭವಿಸುತ್ತಿದ್ದು, ಈ ಬಗ್ಗೆ ಕ್ರಮಕ್ಕೆ ಮುಂದಾಗಬೇಕಿದೆ.
ಮಿಂಚಿನ ಸಂದರ್ಭದಲ್ಲಿ ಏನು ಮಾಡಬೇಕು, ಏನು ಮಾಡಬಾರದು?:
ನೀವು ಬಯಲು ಪ್ರದೇಶದಲ್ಲಿ ನಿಲ್ಲಬೇಡಿ.
ಮನೆಗೆ ತಲುಪಲು ಸಾಧ್ಯವಾಗಿಲ್ಲ ಎಂದರೆ, ಎರಡು ಕಾಲನ್ನು ಒಟ್ಟಿಗೆ ಇರಿಸಿ, ಕುಳಿತು ಕೊಳ್ಳಿ, ಎರಡು ಕೈಯಿಂದ ಕಿವಿಯನ್ನು ಮುಚ್ಚಿ.
ನಿಮ್ಮ ಸುತ್ತಮುತ್ತ ಎತ್ತರದ ಮರ, ಕೊಳ ಅಥವಾ ಕಬ್ಬಿಣದ ಕಂಬ ಇದ್ದರೆ, ಅದರಿಂದ ದೂರವಿರಿ.
14px;">ವಿದ್ಯುತ್ ಪ್ರವಾಹವಾಗುವ ವಸ್ತುಗಳಿಂದ ದೂರು ಸರಿಯಿರಿ.
ಮಿಂಚಿನಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು, ನೀವು ಚೀಲ, ಒಣ ಎಲೆಗಳು, ಒಣ ಮರ ಅಥವಾ ಪ್ಲಾಸ್ಟಿಕ್ ಮೇಲೆ ನಿಲ್ಲಬಹುದು.
ತುಂಬಾ ಜನರ ಸಮೂಹದಲ್ಲಿ ನಿಂತಿದ್ದರೆ, ಅವರಿಂದ ಅಂತರ ಕಾಪಾಡಿಕೊಂಡು ದೂರ ನಿಲ್ಲಿ.
ಮಿಂಚಿನ ಸಮಯದಲ್ಲಿ ನಿಮ್ಮ ಮನೆಯಲ್ಲಿರುವ ರೆಫ್ರಿಜರೇಟರ್, ನಲ್ಲಿಗಳು, ಸ್ವಿಚ್‌ಗಳನ್ನು ಮುಟ್ಟಬೇಡಿ.
ನಿಮ್ಮ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿ.
ಬಿಹಾರದಲ್ಲಿ ಅಧಿಕ ಸಾವು: ಬಿಹಾರದ ವಿಪತ್ತು ನಿರ್ವಹಣಾ ಇಲಾಖೆಯ ವರದಿಯ ಪ್ರಕಾರ, ಬಿಹಾರದಲ್ಲಿ ಪ್ರತಿ ವರ್ಷ 10 ಲಕ್ಷ ಜನರಲ್ಲಿ 2.65 ಜನರು ಸಿಡಿಲಿನಿಂದ ಸಾವನ್ನಪ್ಪುತ್ತಿದ್ದಾರೆ ಈ ಅಂಕಿ ಅಂಶವು ರಾಷ್ಟ್ರೀಯ ಸರಾಸರಿ 2.55 ಸಾವುಗಳಿಗಿಂತ ಹೆಚ್ಚಾಗಿದೆ. ಬಿಹಾರ ವಿಪತ್ತು ನಿರ್ವಹಣಾ ಇಲಾಖೆಯ ಪ್ರಕಾರ, ಹೆಚ್ಚಿನ ಮಿಂಚಿನ ಘಟನೆಗಳು ಬಿಹಾರದ ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿ ಕಂಡುಬರುತ್ತವೆ. ಮೇ ಮತ್ತು ಸೆಪ್ಟೆಂಬರ್ ನಡುವೆ ಮಿಂಚಿನಿಂದಾಗಿ ಹೆಚ್ಚಿನ ಸಾವುಗಳು ಸಂಭವಿಸುತ್ತವೆ.
ಜಾರ್ಖಂಡ್‌ನ ವಜ್ರಮಾರದ ಪಾಠ: ಜಾರ್ಖಂಡ್‌ನಲ್ಲಿ ವಜ್ರಮಾರ ಎಂಬ ಹಳ್ಳಿಯಲ್ಲಿ ಹೀಗೆ ಹಲವು ವರ್ಷದ ಹಿಂದೆ ಜನರು ಮಿಂಚಿನಿಂದ ಸಾವನ್ನಪ್ಪುತ್ತಿದ್ದರು. ಇದನ್ನು ತಪ್ಪಿಸಲು ಗ್ರಾಮದಲ್ಲಿ ಅನೇಕ ಮಿಂಚು ನಿಗ್ರಹಗಳನ್ನು ಸ್ಥಾಪಿಸಲಾಯಿತು. ಇದರಿಂದ ಸಾವಿನ ಸಂಖ್ಯೆ ನಿಂತಿತು. ಇದೇ ರೀತಿಯ ತಂತ್ರವನ್ನು ಬಾಂಗ್ಲಾದೇಶದಲ್ಲಿ ಕೂಡ ಅನುಸರಿಸಲಾಗುತ್ತಿದೆ.
ಬಾಂಗ್ಲಾದೇಶದ ಮಾದರಿ: 2017 ರಲ್ಲಿ ಬಾಂಗ್ಲಾದೇಶದಲ್ಲಿ ಸಿಡಿಲಿನಿಂದ 308 ಜನರು ಸಾವನ್ನಪ್ಪಿದ್ದರು. ಮಿಂಚಿನಿಂದಾಗಿ ನಿರಂತರ ಸಾವುಗಳ ನಂತರ, ಅಲ್ಲಿ ತಾಳೆ ಮರಗಳನ್ನು ನೆಡಲಾಯಿತು. ತಾಳೆ ಮರಗಳು ಎತ್ತರವಾಗಿರುವುದರಿಂದ ಮಿಂಚನ್ನು ಅವುಗಳ ಕಡೆಗೆ ಆಕರ್ಷಿಸುತ್ತವೆ. ಇದರಿಂದಾಗಿ ಮಿಂಚಿನಿಂದ ಸಾವನ್ನಪ್ಪುವವರ ಸಂಖ್ಯೆ ಕಡಿಮೆಯಾಗಿದೆ.














