ದೆಹಲಿ : ಕೋವಿಡ್ ಎರಡನೆಯ ಅಲೆ ಆರಂಭವಾಗಿ ಸುಮಾರು ನಾಲ್ಕು ತಿಂಗಳಾಗಿದ್ದು,ಹೆಚ್ಚಿನ ರಾಜ್ಯಗಳಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಆದರೆ, ಕೇರಳ ಮತ್ತು ಮಹಾರಾಷ್ಟ್ರ ಇನ್ನೂ ಇದರಿಂದ ಹೊರಬಂದಿಲ್ಲ.ದೇಶದ ಒಟ್ಟು ಕೋವಿಡ್ ಪ್ರಕರಣಗಳಲ್ಲಿ ಅರ್ಧದಷ್ಟು ಕೇಸ್‌ಗಳು ಈ ಎರಡು ರಾಜ್ಯಗಳಲ್ಲಿ ಪತ್ತೆಯಾಗಿವೆ.ಕೇರಳದ 14 ಹಾಗೂ ಮಹಾರಾಷ್ಟ್ರದ 15 ಜಿಲ್ಲೆಗಳಲ್ಲಿ ಕೊರೊನಾ ಸಂಖ್ಯೆ ಹೆಚ್ಚಳವಾಗಿರುವುದು ಆತಂಕ ಸೃಷ್ಟಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಕೊರೊನಾ ಎರಡನೇ ಅಲೆ ಸಂಪೂರ್ಣವಾಗಿ ಇನ್ನೂ ಹೋಗಿಲ್ಲ ಜನರು ಕೋವಿಡ್ ನಿಯಮಗಳನ್ನು ಉಲ್ಲಂಘಿಸಬಾರದು ಎಂದು ಎಂದು ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಎಚ್ಚರಿಕೆ ನೀಡಿದ್ದಾರೆ. ಇನ್ನು, ಗುಡ್ ನ್ಯೂಸ್ ಅಂದ್ರೆ ದೇಶದಲ್ಲಿ ದೈನಂದಿನ
ಪ್ರಕರಣಗಳ ಇಳಿಕೆ ಮುಂದುವರಿದಿದೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಪ್ರಕರಣಗಳ ಸಂಖ್ಯೆ ಶೇಕಡ 8 ರಷ್ಟು ಇಳಿಕೆಯಾಗಿದೆ. ಹಾಗೇ 80ರಷ್ಟು ಹೊಸ ಕೋವಿಡ್ ಕೇಸ್‌ಗಳು 90 ಜಿಲ್ಲೆಗಳಿಂದ ಬರುತ್ತಿವೆ ಎಂದು ಲವ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.















