Coastal Bulletin

ವಿದ್ಯಾರ್ಥಿನಿಯೊಬ್ಬರ ಪಿ ಹೆಚ್ ಡಿ ಪ್ರಬಂಧ ಅಂಗೀಕಾರಕ್ಕಾಗಿ ಲಂಚ ಪಡೆದ ಆರೋಪದಲ್ಲಿ ಲೋಕಾಯುಕ್ತದಿಂದ ಬಂಧಿತರಾಗಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಪ್ರೊಫೆಸರ್ ಡಾ.ಅನಿತಾ ರವಿಶಂಕರ್ ಗೆ ಲೋಕಾಯುಕ್ತ ನ್ಯಾಯಾಲಯ ಐದು ವರ್ಷ ಶಿಕ್ಷೆ ವಿಧಿಸಿದೆ.

ಪಿಹೆಚ್‌ಡಿ ವಿದ್ಯಾರ್ಥಿನಿ ಪ್ರೇಮ ಡಿ'ಸೋಜ ಎಂಬವರಿಂದ ಅವರ ಪ್ರಬಂಧ ಅಂಗೀಕಾರ ಆಗಬೇಕಾದರೆ ಮೈಸೂರಿನಿಂದ ಆಗಮಿಸುವ ಮೌಲ್ಯ ಮಾಪಕರ ಖರ್ಚು ಸೇರಿ ರೂ. 16,800 ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. 2012ರ ಡಿಸೆಂಬರ್ 4

ರಂದು ಈ ಬಗ್ಗೆ ಮಂಗಳೂರು ಲೋಕಾಯುಕ್ತ ನಿರೀಕ್ಷಕರಾದ ಉಮೇಶ್ ಜಿ. ಶೇಟ್ ನೇತೃತ್ವದ ತಂಡ ದಾಳಿ ಮಾಡಿದ್ದು ರೂ. 5,000 ಮುಂಗಡ ಹಣ ಸ್ವೀಕರಿಸುತ್ತಿದ್ದಾಗಲೇ ಪ್ರೊಫೆಸರ್ ಅನಿತಾ ರವಿಶಂಕರ್‌ ಅವರನ್ನು  ಬಂಧಿಸಿದ್ದರು.

Leave a Comment