ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆ-ಅಧ್ಯಕ್ಷತೆ ವಹಿಸಿದ ಭಾರತದ ಹಲವು ಘೋಷಣೆಗಳು ಅಂಗೀಕಾರ.

Coastal Bulletin
ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆ-ಅಧ್ಯಕ್ಷತೆ ವಹಿಸಿದ ಭಾರತದ ಹಲವು ಘೋಷಣೆಗಳು ಅಂಗೀಕಾರ.

ನವದೆಹಲಿ: ಭಾರತವು ಜಿ20 ಅಧ್ಯಕ್ಷತೆ ವಹಿಸಿ ಶೃಂಗಸಭೆ ಆಯೋಜಿಸಿದೆ.ಜಿ20 ಇತಿಹಾಸದಲ್ಲೇ ಅತ್ಯಂತ ಸಾಂಸ್ಕೃತಿ, ರೋಮಾಂಚಕ ಹಾಗೂ ಗುರಿ ಆಧಾರಿತ ಅಧ್ಯಕ್ಷತೆ ಅನ್ನೋ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಅಭಿವೃದ್ಧಿ, ತಂತ್ರಜ್ಞಾನ ಬಳಕೆ, ಸುಲಭ ಹಾಗೂ ಸರಳ ಜೀವನಕ್ಕಾಗಿ ಭಾರತ ಒತ್ತು ನೀಡಿದೆ. ವಸುದೈವಕ ಕುಟುಂಬ ಅನ್ನೋ ಪರಿಕಲ್ಪನೆ ಅಡಿಯಲ್ಲಿ ಆಯೋಜಿಸಿರುವ ಶೃಂಗಸಭೆ ಹಲವು ದಾಖಲೆ ಬರೆದಿದೆ.

2023ರಲ್ಲಿ ಭಾರತ ಜಿ20 ಅಧ್ಯಕ್ಷತೆ ವಹಿಸಿಕೊಂಡು ಶೃಂಗಸಭೆ ಆಯೋಜಿಸಿದೆ. 220ಕ್ಕೂ ಹೆಚ್ಚು ಜಿ20 ಶೃಂಗಸಭೆಗಳನ್ನು ಭಾರತ ಆಯೋಜಿಸಿದೆ.  ಇನ್ನು 220ಕ್ಕೂ ಹೆಚ್ಚು ಸಭೆಗಳನ್ನು ಭಾರತದ 60ಕ್ಕೂ ಹೆಚ್ಚು ನಗರದಲ್ಲಿ ಸಭೆ ಆಯೋಜಿಸಲಾಗಿದೆ. ವಿಶೇಷ ಅಂದರೆ ಜಮ್ಮು ಮತ್ತು ಕಾಶ್ಮೀರದಲ್ಲೂ ಭಾರತ ಜಿ20 ಸಭೆ ಆಯೋಜಿಸಿದೆ. 115 ರಾಷ್ಟ್ರದ 25,000ಕ್ಕೂ ಗಣ್ಯ ಅತಿಥಿಗಳು ಪಾಲ್ಗೊಂಡಿದ್ದರು. ಈಜಿಪ್ಟ್, ನೈಜೀರಿಯಾ ಸೇರಿದಂತೆ ಆಫ್ರಿಕಾ ದೇಶಗಳು ಗರಿಷ್ಠ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ.

ಭಾರತದ ಜಿ20 ಶೃಂಗಸಭೆಯಲ್ಲಿ ಭಾರತ ಹೆಜ್ಜೆಗುರುತು ಮೂಡಿಸಿದೆ. ಆಹಾರ ಭದ್ರತೆ, ಪೋಷಣೆ, ಸಾಗರ ಆರ್ಥಿಕತೆಗಾಗಿ  ಉನ್ನತ  ಮಟ್ಟದ ತತ್ವಗಳು, ಪ್ರವಾಸೋದ್ಯಮ, MSME ಮಾಹಿತಿಗೆ ಪ್ರವೇಶ ಹೆಚ್ಚಿಸಲು ಕ್ರಮ, ದೆಹಲಿ ಶೃಂಗಸಭೆಯಲ್ಲಿ

ಆಫ್ರಿಕನ್ ಒಕ್ಕೂಟವನ್ನು ಜಿ20 ಖಾಯಂ ಸದಸ್ಯರನ್ನಾಗಿ ಸೇರಿಸುವುದು ಸೇರಿದಂತೆ ಹಲವು ಫಲಿತಾಂಶಗಳು ಹೊರಬಿದ್ದಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್, ಬಲಿಷ್ಠ, ಸುಸ್ಥಿರ ಹಾಗೂ ಸಮತೋಲನ ಬೆಳವಣಿಗೆ ಉತ್ತೇಜನ ನೀಡಲು ಭಾರತದ ಜಿ20 ಶೃಂಗಸಭೆ ಮಹತ್ವದ ಪಾತ್ರವಹಿಸಿದೆ ಎಂದಿದ್ದಾರೆ.

ಭಾರತದ ಜಿ20 ಶೃಂಗ ಸಭೆ ಹೊಸ ಮೈಲಿಗಲ್ಲು ನಿರ್ಮಿಸಿದೆ. ದೆಹಲಿಯಲ್ಲಿ ನಡೆಯುತ್ತಿರುವ ಶೃಂಗಸಭೆಯಲ್ಲಿ 73 ಘೋಷಣೆಗಳು ಹೊರಬಿದ್ದಿದೆ. ಇಷ್ಟೇ ಅಲ್ಲ ಈ 73 ಘೋಷಣೆಗಳನ್ನು ವಿಶ್ವನಾಯಕರು ಅಂಗೀಕರಿಸಿದ್ದಾರೆ.   ಈ ತನ ಯಾವುದೇ ಜಿ20 ಸಭೆಯಲ್ಲಿ ಇಷ್ಟು ಘೋಷಣೆಗಳಿಗೆ ಅಂಗೀಕಾರ ಸಿಕ್ಕಿಲ್ಲ. ಇದರ ಜೊತೆಗೆ 39 ದಾಖಲೆಗಳನ್ನು ಲಗತ್ತಿಸಿ ಪ್ರಸ್ತುತಪಡಿಸಲಾಗಿದೆ. ಈ ದಾಖಲೆಗಳು ಮಾನ್ಯವಾಗಿದೆ.

Leave a Comment