ಕಳೆದ ಎರಡು ದಿನಗಳಲ್ಲಿ ಉತ್ತರ ಗಾಜಾದ 200 ಉಗ್ರ ನೆಲೆಗಳನ್ನು ಧ್ವಂಸಗೊಳಿಸಿದ ಇಸ್ರೇಲ್! ದಕ್ಷಿಣ ಗಾಜಾಕ್ಕೆ ದಾಳಿ ಮಾಡುವ ಸೂಚನೆ.

Coastal Bulletin
ಕಳೆದ ಎರಡು ದಿನಗಳಲ್ಲಿ ಉತ್ತರ ಗಾಜಾದ 200 ಉಗ್ರ ನೆಲೆಗಳನ್ನು ಧ್ವಂಸಗೊಳಿಸಿದ ಇಸ್ರೇಲ್! ದಕ್ಷಿಣ ಗಾಜಾಕ್ಕೆ ದಾಳಿ ಮಾಡುವ ಸೂಚನೆ.

ಜೆರುಸಲೇಂ: ಹಮಾಸ್‌- ಇಸ್ರೇಲ್‌ ನಡುವಿನ ಕದನದಲ್ಲಿ ಹಮಾಸ್‌ ಉಗ್ರರ ನೆಲೆಗಳನ್ನು ಧ್ವಂಸಗೊಳಿಸುವ ಇಸ್ರೇಲ್‌ ಕಾರ್ಯಾಚರಣೆ ಬಿರುಸಾಗಿದ್ದು ಒಂದೇ ರಾತ್ರಿಯಲ್ಲಿ 200 ಉಗ್ರ ನೆಲೆಗಳನ್ನು ಧ್ವಂಸಗೊಳಿಸಿದೆ. ಇದರೊಂದಿಗೆ ಉತ್ತರ ಗಾಜಾದಲ್ಲಿನ ತನ್ನ ಕಾರ್ಯಾಚರಣೆ ಬಹುತೇಕ ಪೂರ್ಣಗೊಂಡಿದೆ ಎಂಬುದಾಗಿಯೂ ತಿಳಿಸಿದೆ.

ಇಸ್ರೇಲ್‌ ಸೇನೆ ನೀಡಿರುವ ಮಾಹಿತಿ ಪ್ರಕಾರ, ಹಮಾಸ್‌ ಉಗ್ರರ ಮೂಲಸೌಕರ್ಯಗಳಿರುವ ಪ್ರದೇಶಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ. ಉಗ್ರರು ಶಾಲೆಗಳಲ್ಲಿ ಸುರಂಗಗಳನ್ನು ನಿರ್ಮಿಸಿ ಅವುಗಳ ಮೂಲಕ ಉಗ್ರ ಚಟುವಟಿಕೆ ನಡೆಸುತ್ತಿದ್ದರು ಈ ಹಿನ್ನೆಲೆಯಲ್ಲಿ ಶಾಲೆಗಳನ್ನೂ ಪುಡಿಗಟ್ಟಲಾಗಿದ್ದು, ಬಹುತೇಕ ಕಾರ್ಯಾಚರಣೆ ಪೂರ್ಣಗೊಂಡಿದೆ. ಮುಂದೆ ದಕ್ಷಿಣ ಭಾಗದಲ್ಲಿರುವ ಹಮಾಸ್‌ ಸೌಕರ್ಯಗಳನ್ನು ಗುರಿಯಾಗಿಸಲು ಯೋಜಿಸಿರುವುದಾಗಿ ಹೇಳಿದೆ. ಇಸ್ರೇಲ್‌ ಪಡೆಗಳ ಈ ಹೇಳಿಕೆ ದಕ್ಷಿಣ ಗಾಜಾದ

ನಿವಾಸಿಗಳಲ್ಲಿ ಆತಂಕ ಹೆಚ್ಚಿದೆ.

ನೂರಾರು ಮಂದಿ ಪ್ಯಾಲೆಸ್ತೀನಿಯರು ಆಶ್ರಯ ಪಡೆದಿರುವ ದಕ್ಷಿಣದ ಪಟ್ಟಣ ಖಾನ್‌ ಯೂನಿಸ್‌ನಿಂದ ಎಲ್ಲರೂ ಸಾಮೂಹಿಕವಾಗಿ ಸ್ಥಳಾಂತರಗೊಳ್ಳಿ ಎಂದು ಇಸ್ರೇಲ್‌ ಪಡೆಗಳು ಕರೆ ನೀಡಿವೆ. ಗಾಜಾದ ವಿವಿಧ ಭಾಗಗಳಲ್ಲಿ ಕಾರ್ಯಾಚರಣೆ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ನಾಗರಿಕರಿಗೆ ತೊಂದರೆ ಆಗಬಾರದೆಂಬ ಉದ್ದೇಶಕ್ಕೆ ಈ ಕರೆ ನೀಡಿರುವುದಾಗಿ ಹೇಳಿದೆ. ಆದರೆ ನೆಲೆ ಕಳೆದುಕೊಂಡಿರುವ ಪ್ಯಾಲೆಸ್ತೀನಿಯರಿಗೆ ಎಲ್ಲಿಗೆ ಹೋಗುವುದು ಎಂದು ದಿಕ್ಕು ತೋಚದಂತಾಗಿದೆ.

Leave a Comment