ಕಾಂಗ್ರೆಸ್‌ನ ಭಾರತ್ ನ್ಯಾಯ್ ಯಾತ್ರೆಯಲ್ಲಿ ನಾಯಿ ತಿನ್ನದ ಬಿಸ್ಕಟ್ ಕಾರ್ಯಕರ್ತನಿಗೆ ನೀಡಿದ ರಾಹುಲ್ ಗಾಂಧಿ- ವಿಡಿಯೋ ವೈರಲ್, ಸ್ವಪಕ್ಷದವರಿಂದಲೇ ಆಕ್ರೋಶ.

Coastal Bulletin
ಕಾಂಗ್ರೆಸ್‌ನ ಭಾರತ್ ನ್ಯಾಯ್ ಯಾತ್ರೆಯಲ್ಲಿ ನಾಯಿ ತಿನ್ನದ ಬಿಸ್ಕಟ್ ಕಾರ್ಯಕರ್ತನಿಗೆ ನೀಡಿದ ರಾಹುಲ್ ಗಾಂಧಿ- ವಿಡಿಯೋ ವೈರಲ್, ಸ್ವಪಕ್ಷದವರಿಂದಲೇ ಆಕ್ರೋಶ.

ರಾಂಚಿ: ದಕ್ಷಿಣ ಭಾರತದಲ್ಲಿ ಭಾರತ್​ ಜೋಡೋ ಯಾತ್ರೆ ಯಶಸ್ವಿಯಾದ ಬೆನ್ನಲ್ಲೇ ಈಶಾನ್ಯ ಭಾರತದ ಕಡೆ ಭಾರತ್​ ನ್ಯಾಯ್ ಯಾತ್ರೆ ಹೆಸರಲ್ಲಿ ರಾಹುಲ್ ಗಾಂಧಿ ಯಾತ್ರೆ ಕೈಗೊಂಡಿದ್ದಾರೆ. ಮಣಿಪುರದಲ್ಲಿ ಶುರುವಾದ ಈ ಭಾರತ್​ ನ್ಯಾಯ್ ಯಾತ್ರೆ ಜಾರ್ಖಂಡ್​ ತಲಿಪಿದೆ. ಈ ಮದ್ಯೆ ಜಾರ್ಖಂಡ್​ನಲ್ಲಿ ರಾಹುಲ್​ ಗಾಂಧಿ ಮಾಡಿದ ಯಡವಟ್ಟು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ನಾಯಿಯೊಂದಕ್ಕೆ ಬಿಸ್ಕೆಟ್ ತಿನ್ನಿಸಲು ರಾಹುಲ್ ಗಾಂಧಿ ಮುಂದಾಗಿದ್ದಾರೆ. ಆದರೆ ಆ ನಾಯಿ ತಿನ್ನದಿದ್ದಕ್ಕೆ, ಅದೇ ಬಿಸ್ಕೆಟ್​ಅನ್ನು ಪಕ್ಕದಲ್ಲಿದ್ದ ಪಕ್ಷದ ಕಾರ್ಯಕರ್ತರಿಗೆ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ರಾಹುಲ್ ಗಾಂಧಿ ಅವರು ತಮಗರಿವಿಲ್ಲದೆ ಮಾಡುವ ಕೆಲವು ಯಡವಟ್ಟುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಖತ್ ಟ್ರೋಲ್ ಆಗುತ್ತಿರುತ್ತವೆ. ಇದೇ ರೀತಿ ಜಾರ್ಖಂಡ್​ನಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆ ವೇಳೆ ನಡೆದ ಈ ಘಟನೆ ಕೂಡ ಚರ್ಚೆಗೀಡಾಗುತ್ತಿದೆ. ಜಾರ್ಖಂಡ್​ನ ಧನಬಾದ್​ನಲ್ಲಿ ಯಾತ್ರೆ ಸಾಗುವಾಗ ನಾಯಿ ಮರಿಯೊಂದನ್ನ ಕಾರಿನ ಮೇಲೆ ಕೂರಿಸಿಕೊಂಡಿದ್ದಾರೆ. ನಂತರ ಆ ನಾಯಿ ಮರಿಗೆ ಬಿಸ್ಕೆಟ್ ನೀಡಿದ್ದಾರೆ. ಆದರೆ ನಾಯಿ ಬಿಸ್ಕೆಟ್​ ತಿನ್ನದಿದ್ದಕ್ಕೆ ಪಕ್ಕದಲ್ಲಿದ್ದ ಕಾರ್ಯಕರ್ತನಿಗೆ ನೀಡಿದ್ದಾರೆ. ಈ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ಗಾಂಧಿ ನಡೆಗೆ ಸಾಕಷ್ಟು ಖಂಡನೆ ವ್ಯಕ್ತವಾಗುತ್ತಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಸಾಕಷ್ಟು ಜನ ಕಾಂಗ್ರೆಸ್​ ಪಕ್ಷ ಕಾರ್ಯಕರ್ತರನ್ನ ನಡೆಸಿಕೊಳ್ಳುವ ರೀತಿ ಇದು ಎಂದು ವ್ಯಂಗ್ಯವಾಡಿದ್ದಾರೆ. ಅಲ್ಲದೆ ಬೀದಿ ನಾಯಿಗೂ ಕಾರ್ಯಕರ್ತರಿಗೂ ಯಾವುದೇ

ವ್ಯತ್ಯಾಸವಿಲ್ಲದಂತೆ ನಡೆಸಿಕೊಂಡಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಬೀದಿ ನಾಯಿ ಬಗ್ಗೆ ರಾಹುಲ್​ಗಿರುವ ಮಮತೆಯನ್ನು ಮೆಚ್ಚಿದ್ದಾರೆ. ಆದರೆ ಮೈಮರೆತು ಕಾರ್ಯಕರ್ತರ ಕೈಗೆ ನೀಡಿರಬಹುದು ಎಂದು ಸಮರ್ಥಿಸಿಕೊಂಡಿದ್ದಾರೆ.

ವಿಡಿಯೋ ಲಿಂಕ್

https://youtu.be/XnOTz64tqX4?si=eyNFRH6AxaO71HvM

ಬೂತ್​ ಏಜೆಂಟರು ಬೊಗಳುವ ನಾಯಿಯಂತೆ ಸ್ಟ್ರಾಂಗ್ ಇರಬೇಕೆಂದಿದ್ದ ಖರ್ಗೆ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ನೀಡಿದ್ದ ಹೇಳಿಕೆ ಕೂಡ ಭಾರೀ ವೈರಲ್ ಆಗುತ್ತಿದೆ.ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ನಡೆದ ನ್ಯಾಯ ಸಂಕಲ್ಪ ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿಯಾಗಿದ್ದ ಮಲ್ಲಿಕಾರ್ಜುನ್ ಖರ್ಗೆ ಬೂತ್ ಏಜೆಂಟರನ್ನು (booth agent) ನೇಮಿಸಿಕೊಳ್ಳುವಾಗ ಹೇಗಿರ ಬೇಕು ಎನ್ನುವುದನ್ನು ವಿಚಿತ್ರ ಉದಾಹರಣೆ ನೀಡಿ ವಿವರಿಸಿದ್ದರು. ಜನರು ಪ್ರಾಣಿಯನ್ನು ಖರೀದಿಸುವಾಗಲೂ ಅದು ಬೊಗಳುತ್ತಾ, ಸುಮ್ಮನೆ ಕೂಗುತ್ತಾ ಅಂತ ನೋಡುತ್ತಾರೆ. ಹೀಗೆಯೇ ಬೂತ್ ಏಜೆಂಟ್‌ರನ್ನು ನೇಮಿಸುವಾಗಲೂ ಬೊಗಳುತ್ತಾ, ಹೊರಾಡುತ್ತಾ, ಯಾವಾಗಲೂ ನಿಮ್ಮ ಜೊತೆಗಿರುತ್ತಾ ಅಂತ ನೋಡಬೇಕು. ಅಂತವರನ್ನು ನೇಮಿಸಿಕೊಳ್ಳಬೇಕು ಎಂದಿದ್ದರು.

Leave a Comment