ಜಾರ್ಖಂಡ್ ನೂತನ ಮುಖ್ಯಮಂತ್ರಿ ಚಂಪೈ ಸೊರೇನ್ ಗೆ ಇಂದು ವಿಶ್ವಾಸಮತ ಸಾಬೀತುಪಡಿಸುವ ಪರೀಕ್ಷೆ.

Coastal Bulletin
ಜಾರ್ಖಂಡ್ ನೂತನ ಮುಖ್ಯಮಂತ್ರಿ ಚಂಪೈ ಸೊರೇನ್ ಗೆ ಇಂದು ವಿಶ್ವಾಸಮತ ಸಾಬೀತುಪಡಿಸುವ ಪರೀಕ್ಷೆ.

ರಾಂಚಿ: ಭೂ ಅಕ್ರಮ ಪ್ರಕರಣದಲ್ಲಿ ಆರೋಪಿವಾಗಿರುವ ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌, ಬುಧವಾರ ತಮ್ಮ ನಿವಾಸದಲ್ಲೇ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳಿಂದ ವಿಚಾರಣೆಗೆ ಗುರಿಯಾಗಿ ಪ್ರಕರಣದಲ್ಲಿ ಸೊರೇನ್‌ ವಿರುದ್ಧ ಸಾಕಷ್ಟು ಖಚಿತ ಸಾಕ್ಷ್ಯಗಳು ಲಭ್ಯವಾಗಿರುವ ಹಿನ್ನೆಲೆಯಲ್ಲಿ ಕಳೆದ ಬುಧವಾರ ಅವರನ್ನು ಬಂಧಿಸಿದ ಬಳಿಕ ನೂತನ ಮುಖ್ಯಮಂತ್ರಿಯಾಗಿ ಚಂಪೈ ಸೊರೇನ್ ಆಯ್ಕೆಯಾಗಿದ್ದು ಇಂದು ವಿಶ್ವಾಸಮತ ಸಾಬೀತುಪಡಿಸಬೇಕಿದೆ.

ಜೆಎಂಎಂ ನಾಯಕ ಚಂಪೈ ಸೊರೆನ್ ಮುಖ್ಯಮಂತ್ರಿಯಾದ ನಂತರ ಶಾಸಕರನ್ನು ಹೈದರಾಬಾದ್ ಬಳಿಯ ರೆಸಾರ್ಟ್‌ನಲ್ಲಿ ಇರಿಸಲಾಗಿತ್ತು. 

ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮತ್ತು ಅದರ ಮೈತ್ರಿಕೂಟದ ಸುಮಾರು 40 ಶಾಸಕರು ಸೋಮವಾರ ವಿಶ್ವಾಸಮತ ಪರೀಕ್ಷೆಗೆ ಹಾಜರಾಗಲು ಹೈದರಾಬಾದ್‌ನಿಂದ ಭಾನುವಾರ ರಾಜ್ಯಕ್ಕೆ ಮರಳಿದ್ದಾರೆ.

ಆಡಳಿತಾರೂಢ ಜೆಎಂಎಂ ತನ್ನ ಶಾಸಕರನ್ನು ಎದುರಾಳಿ ಪಕ್ಷಗಳು ಪಕ್ಷ ಬದಲಾಯಿಸುವುದನ್ನು ತಡೆಯಲು 'ರೆಸಾರ್ಟ್ ರಾಜಕೀಯದ ಮೊರೆ ಹೋಗಿದ್ದರು.

ಜಾರ್ಖಂಡ್‌ನಲ್ಲಿ ಆಡಳಿತಾರೂಢ ಮೈತ್ರಿಕೂಟವು 81 ಸದಸ್ಯರ ವಿಧಾನಸಭೆಯಲ್ಲಿ ಬಹುಮತದ 41 ಮತ್ತು ಐವರು ಶಾಸಕರನ್ನು ಹೊಂದಿದೆ. 81 ಸ್ಥಾನಗಳಲ್ಲಿ ಒಂದು ಖಾಲಿಯಾಗಿದೆ, ಆದ್ದರಿಂದ 80

ಸ್ಥಾನಗಳಿಗೆ ಎಣಿಸಿದಾಗ ಬಹುಮತಕ್ಕೆ 41 ಸ್ಥಾನಗಳು ಬೇಕಿದೆ. ಜೆಎಂಎಂ, ಕಾಂಗ್ರೆಸ್, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ), ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಎಂಎಲ್) ಒಟ್ಟು 46 ಶಾಸಕರನ್ನು ಹೊಂದಿವೆ. ಅವುಗಳೆಂದರೆ ಜೆಎಂಎಂ (28), ಕಾಂಗ್ರೆಸ್ (16), ಆರ್‌ಜೆಡಿ (1), ಮತ್ತು ಸಿಪಿಐ (ಎಂಎಲ್) 1 ಶಾಸಕ ಬಲವನ್ನು ಹೊಂದಿದೆ.

ಬಿಜೆಪಿ ಮತ್ತು ಮಿತ್ರಪಕ್ಷಗಳು 29 ಶಾಸಕರನ್ನು ಹೊಂದಿವೆ. ಏನಾದರೂ ತೀವ್ರವಾದ ಅಥವಾ ದೊಡ್ಡ ಟ್ವಿಸ್ಟ್ ಸಂಭವಿಸದ ಹೊರತು, ಜೆಎಂಎಂ ಸರ್ಕಾರವು ಬಹುಮತ ಪರೀಕ್ಷೆಯಲ್ಲಿ ಸುಲಭವಾಗಿ ಪಾಸಾಗಲಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.

Leave a Comment