ಪಾಕಿಸ್ತಾನ : ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ದುಬೈನಲ್ಲಿ ನಿಧನರಾಗಿದ್ದಾರೆ.
ಪರ್ವೇಜ್ ಮುಷರಫ್ ಅವರು ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು ಮುಂಜಾನೆ ಅವರನ್ನು ದುಬೈನ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸದೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. 2007ರಲ್ಲಿ ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು. 2013ರಲ್ಲಿ
ಅವರ ವಿರುದ್ಧ ಕೇಸ್ ದಾಖಲಾಗಿತ್ತು. ಈ ಸಂಬಂಧ ವಿಚಾರಣೆ ನಡೆಸಿದ್ದ ಪಾಕಿಸ್ತಾನದ ಪೇಶಾವರ ಹೈಕೋರ್ಟ್ ನ ವಿಶೇಷ ಪೀಠ ಮುಷರಫ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಿತ್ತು.
ಪಾಕ್ ಸೇನಾ ಮುಖ್ಯಸ್ಥನಾಗಿದ್ದ ಸಮಯದಲ್ಲಿ ಮುಷರಫ್ ಭಾರತದ ಮೇಲೆ ಕಾರ್ಗಿಲ್ ಯುದ್ದ ಸಾರಿದ್ದನ್ನು ಸ್ಮರಿಸಬಹುದು.














